Kannada Duniya

ದೂರದೂರಿಗೆ ಪ್ರಯಾಣ ಮಾಡುವವರು ಇದನ್ನು ನೆನಪಿನಲ್ಲಿಟ್ಟುಕೊಳ್ಳಿ!

ದೂರದೂರಿಗೆ ಪ್ರವಾಸ ಹೊರಡುವಾಗ ಹೋಟೆಲ್ ಗಳಲ್ಲಿ ಉಳಿದುಕೊಳ್ಳುವುದು ಅನಿವಾರ್ಯ. ಹೋಟೆಲ್ ಗಳಲ್ಲಿ ಕಪಲ್ಸ್ ಉಳಿಯುವಾಗ ಈ ಕೆಲವು ಸಂಗತಿಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ.

ನೀವು ನಿಮ್ಮ ಸಂಗಾತಿಯೊಂದಿಗೆ ಹೋಟೆಲ್ ನಲ್ಲಿ ಉಳಿಯುವವರಾಗಿದ್ದರೆ ನಿಮ್ಮಿಬ್ಬರಿಗೂ 18 ವರ್ಷ ತುಂಬಿರಬೇಕು. ಅದಕ್ಕಿಂತ ಕಡಿಮೆ ವಯಸ್ಸಿನ ಜೋಡಿಗಳು ಹೋಟೆಲ್ ಗಳಲ್ಲಿ ಉಳಿಯುವಂತಿಲ್ಲ.

ಈ ಸಂದರ್ಭದಲ್ಲಿ ನೀವಿಬ್ಬರೂ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ನಂತಹ ಗುರುತಿನ ಚೀಟಿ ಹೊಂದಿರಬೇಕು. ಇದರ ಜೆರಾಕ್ಸ್ ಕಾಪಿಯನ್ನು ಹೊಟೇಲ್ ನಲ್ಲಿ ಸಲ್ಲಿಸಬೇಕು.

ಇತ್ತೀಚೆಗೆ ಹೊಟೇಲ್ ಗಳಲ್ಲಿ ಗುಪ್ತವಾಗಿ ಸಿಸಿ ಕ್ಯಾಮೆರಾಗಳನ್ನು ಇಡುವುದು ಸಾಮಾನ್ಯವಾಗಿದೆ. ಹಾಗಾಗಿ ಹೊಟೇಲ್ ರೂಮ್ ಅನ್ನು ಒಮ್ಮೆ ಸಂಪೂರ್ಣವಾಗಿ ಪರಿಶೀಲಿಸಿಕೊಳ್ಳಿ. ರೂಮ್ ಸಂಪೂರ್ಣ ಕತ್ತಲಾದಾಗ ಕ್ಯಾಮೆರಾ ಲೆನ್ಸ್ ಇದ್ದರೆ ಅದು ಹೊಳೆಯುವುದು ನಿಮ್ಮ ಕಣ್ಣಿಗೆ ಬೀಳಬಹುದು.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...