Kannada Duniya

ಚಿಕ್ಕ ಮಗುವಿಗೆ ನ್ಯುಮೋನಿಯಾ ಇದ್ದರೆ ತಾಯಂದಿರು ಈ ಸಲಹೆ ಪಾಲಿಸಿ

ಕೆಲವು ಚಿಕ್ಕ ಮಕ್ಕಳು ನ್ಯುಮೋನಿಯಾ ಸಮಸ್ಯೆಗೆ ಒಳಗಾಗುತ್ತವೆ. ಇದು ತುಂಬಾ ಅಪಾಯಕಾರಿ ಕಾಯಿಲೆಯಾಗಿರುವ ಕಾರಣ ಮಗುವನ್ನು ತುಂಬಾ ಎಚ್ಚರಿಕೆಯಿಂದ ನೋಡಿಕೊಳ್ಳಿ. ಹಾಗೇ ತಾಯಂದಿರು ಈ ಸಲಹೆ ಪಾಲಿಸಿ.

ಮಗುವಿಗೆ ನ್ಯುಮೋನಿಯಾ ಇದ್ದರೆ ಮಗುವಿಗೆ ಹಾಲುಣಿಸುವುದನ್ನು ನಿಲ್ಲಿಸಬೇಡಿ. ಇದು ಮಗು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೇ ಮಗುವಿಗೆ ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ನೀಡಿ.

ಅಲ್ಲದೇ ಮಗುವಿಗೆ ಸಾಕಷ್ಟು ವಿಶ್ರಾಂತಿಯನ್ನು ನೀಡಿ. ಮಗುವಿಗ ನಿದ್ರೆ ಮಾಡಿಸಿ. ನಿದ್ರೆ ಮಗುವಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಮಗುವಿನ ಆರೋಗ್ಯ ಸುಧಾರಿಸುತ್ತದೆಯಂತೆ.

ಸಾಧ್ಯವಾದಷ್ಟು ಮಗುವಿನ ಕೋಣೆಯನ್ನು ಬೆಚ್ಚಗಿರಿಸಿ. ಮಗುವನ್ನು ಕಂಬಳಿ, ದಪ್ಪವಾದ ಬಟ್ಟೆಯಿಂದ ಮುಚ್ಚಿಡಿ. ಹೊರಗಿನಿಂದ ಬಂದವರಿಗೆ ಕೋಣೆಯ ಒಳಗೆ ಬರಲು ಬಿಡಬೇಡಿ. ಮಗುವನ್ನು ನಿಮ್ಮ ಮಡಿಲಿನಲ್ಲಿ ಹೆಚ್ಚುಹೊತ್ತು ಮಲಗಿಸಿಕೊಳ್ಳಿ. ಇದರಿಂದ ಮಗು ತಾಯಿಯ ಶಾಖದಿಂದ ಬೆಚ್ಚಗಿರುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...