Kannada Duniya

ಹೋಟೆಲ್ ಶೈಲಿಯ ಬಟರ್ ನಾನ್ ಮನೆಯಲ್ಲಿ ಮಾಡಿ ಸವಿದು ನೋಡಿ

ಹೋಟೆಲ್ ಗೆ ಹೋದಾಗ ಬಟರ್ ನಾನ್ ಆರ್ಡರ್ ಮಾಡಿ ಸವಿದಿರುತ್ತಿರಿ. ಮತ್ತೆ ಮತ್ತೇ ಅದನ್ನು ತಿನ್ನಬೇಕು ಅನಿಸುತ್ತಿದ್ದೇಯಾ…? ಹಾಗಾದ್ರೆ ತಡ ಯಾಕೆ…? ಇಲ್ಲಿ ಸುಲಭವಾದ ವಿಧಾನವಿದೆ ಮನೆಯಲ್ಲಿ ಟ್ರೈ ಮಾಡಿ ನೋಡಿ.

ಮೈದಾ-2 ಕಪ್, ಮೊಸರು-1/4 ಕಪ್, ಬೇಕಿಂಗ್ ಸೋಡಾ-1/4 ಟೀ ಸ್ಪೂನ್,ಸಕ್ಕರೆ-1/2 ಟೀ ಸ್ಪೂನ್,ಉಪ್ಪು-ರುಚಿಗೆ ತಕ್ಕಷ್ಟು, ಎಣ್ಣೆ – 1 ½ ಟೇಬಲ್ ಸ್ಪೂನ್, ಬೆಣ್ಣೆ-ಸ್ವಲ್ಪ.

ಮಾಡುವ ವಿಧಾನ

ಮೊದಲಿಗೆ ಒಂದು ಪಾತ್ರೆಗೆ ಮೈದಾವನ್ನು ಜರಡಿ ಹಿಡಿದುಕೊಳ್ಳಿ. ನಂತರ ಅದಕ್ಕೆ ಮೊಸರು, ಬೇಕಿಂಗ್ ಸೋಡಾ, ಉಪ್ಪು, ಸಕ್ಕರೆ,ಎಣ್ಣೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಸ್ವಲ್ಪ ನೀರು ಸೇರಿಸಿಕೊಂಡು ಮೆತ್ತಗೆ ಹಿಟ್ಟನ್ನು ನಾದಿಕೊಳ್ಳಿ. ನಂತರ ಈ ಹಿಟ್ಟಿಗೆ ಒಂದು ಬಟ್ಟೆ ಮುಚ್ಚಿ 2 ಗಂಟೆಗಳ ಕಾಲ ಹಾಗೇ ಇಡಿ. ನಂತರ ಹಿಟ್ಟನ್ನು ತೆಗೆದುಕೊಂಡು ಸಮನಾದ ಗಾತ್ರದಲ್ಲಿ 10 ಉಂಡೆಗಳನ್ನು ಮಾಡಿಕೊಳ್ಳಿ. ನಂತರ ಸ್ವಲ್ಪ ಮೈದಾ ಹಿಟ್ಟು ಹಾಕಿ ಲಟ್ಟಿಸಿಕೊಳ್ಳಿ.ನಂತರ ಲಟ್ಟಿಸಿಕೊಂಡ ನಾನ್ ಮೇಲೆ ಬೆಣ್ಣೆಯನ್ನು ಸವರಿ.ನಂತರ ನಾನ್ ಅನ್ನು ಅರ್ಧ ಭಾಗಕ್ಕೆ ಮಡಚಿಕೊಂಡು ಆ ಭಾಗಕ್ಕೆ ಬೆಣ್ಣೆ ಸವರಿ ಮತ್ತೆ ಮಡಚಿಕೊಳ್ಳಿ. ಇದು ತ್ರಿಕೋನಾ ಆಕಾರಕ್ಕೆ ಬರುವವರೆಗೆ ಪೋಲ್ಡ್ ಮಾಡಿಕೊಳ್ಳಿ.ನಂತರ ಇದನ್ನು ಲಟ್ಟಿಸಿಕೊಳ್ಳಿ. ಈ ನಾನ್ ಅನ್ನು ತಂದೂರ್ ನಲ್ಲಿಟ್ಟು ಬೇಯಿಸಿಕೊಳ್ಳಿ. ಎರಡೂ ಕಡೆ ಹೊಂಬಣ್ಣ ಬರುವವರೆಗೆ ಬೇಯಿಸಿಕೊಳ್ಳಿ. ನಂತರ ಅದಕ್ಕೆ ತುಪ್ಪ ಸವರಿ ಕಟ್ಟರ್ ನಲ್ಲಿ ಕತ್ತರಿಸಿಕೊಳ್ಳಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...