Kannada Duniya

Travel: ಮಕ್ಕಳೊಂದಿಗೆ ಪ್ರವಾಸಕ್ಕೆ ತೆರಳುವವರು ಈ ಸಲಹೆ ಪಾಲಿಸಿ

ಮಕ್ಕಳೊಂದಿಗೆ ಪ್ರವಾಸ ಮಾಡುವುದು ತುಂಬಾ ಖುಷಿಯನ್ನು ನೀಡುತ್ತದೆ. ಮಕ್ಕಳ ಸಂಭ್ರಮ, ಆನಂದವನ್ನು ನೋಡಿದಾಗ ಮನಸ್ಸಿಗೆ ಹಿತವೆನಿಸುತ್ತದೆ. ಆದರೆ ಮಕ್ಕಳೊಂದಿಗೆ ಬೇರೆ ಪ್ರದೇಶಕ್ಕೆ ಹೋಗುವಾಗ ಕೆಲವು ಸಲಹೆಗಳನ್ನು ಪಾಲಿಸಬೇಕು. ಇಲ್ಲವಾದರೆ ಸಮಸ್ಯೆಗಳುಂಟಾಗಬಹುದು. ಹಾಗಾಗಿ ಮಕ್ಕಳೊಂದಿಗೆ ಪ್ರವಾಸ ಮಾಡುವಾಗ ಈ ಸಲಹೆ ಪಾಲಿಸಿ.

 

-ಮಕ್ಕಳೊಂದಿಗೆ ಪ್ರವಾಸ ಮಾಡುವುದಾದರೆ ಮೊದಲೇ ಹೋಟೆಲ್ ಅನ್ನು ಬುಕ್ ಮಾಡಿ ಇಡಿ. ಯಾಕೆಂದರೆ ನಿಮ್ಮ ಮಕ್ಕಳಿಗೆ ಸೂಕ್ತವಾದ ಹೋಟೆಲ್ ಅನ್ನು ಆಯ್ಕೆ ಮಾಡಬಹುದು. ಇಲ್ಲವಾದರೆ ಹೋಟೆಲ್ ಸಿಗದೆ ಪರದಾಡಬೇಕಾಗುತ್ತದೆ.

 

-ನೀವು ಮಕ್ಕಳೊಂದಿಗೆ ಪ್ರಯಾಣ ಬೆಳೆಸುತ್ತಿದ್ದರೆ ರಾಶ್ ಕ್ರೀಂ, ಹಾಲು, ಪ್ಯಾಕ್ ಮಾಡಿದ ಆಹಾರ, ಬಟ್ಟೆಗಳು, ಆಟಿಕೆಗಳು ಮುಂತಾದ ವಸ್ತುಗಳನ್ನು ತೆಗೆದುಕೊಂಡು ಹೋಗಿ. ಇಲ್ಲವಾದರೆ ಪ್ರವಾಸದ ವೇಳೆ ನಿಮಗೆ ಅವರು ಕಿರಿಕಿರಿ ಮಾಡಬಹುದು.

 

-ಹಾಗೇ ಮಕ್ಕಳಿಗೆ ಪ್ರಿಯವಾದ ತಿಂಡಿಗಳನ್ನು ಪ್ಯಾಕ್ ಮಾಡಿಕೊಂಡು ಹೋಗಿ. ಇಲ್ಲವಾದರೆ ಅವರಿಗೆ ಹಸಿವಿನ ಸಮಸ್ಯೆ ಕಾಡಬಹುದು. ದಾರಿಯಲ್ಲಿ ಕೆಲವೊಮ್ಮೆ ಆಹಾರ ಸಿಗುವುದು ಕಷ್ಟವಾಗಬಹುದು. ಹಾಗಾಗಿ ನಿಮ್ಮ ಬ್ಯಾಗ್ ನಲ್ಲಿ ಕೆಲವು ತಿಂಡಿಗಳಿರಲಿ.

 

Kids Health:ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಪೋಷಕರು ಮಾಡಬೇಕಾದದ್ದು ಏನು?

 

-ಪ್ರಯಾಣ ಮಾಡುವಾಗ ಕೆಲವೊಮ್ಮೆ ಮಕ್ಕಳಿಗೆ ಆರೋಗ್ಯ ಸಮಸ್ಯೆಗಳು ಕಾಡಬಹುದು. ಹಾಗಾಗಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ನಿಮ್ಮ ಜೊತೆ ತೆಗೆದುಕೊಂಡು ಹೋಗಿ. ಅದರಲ್ಲಿ ಮಕ್ಕಳಿಗೆ ಸಾಮಾನ್ಯವಾಗಿ ಕಾಡುವಂತಹ ಜ್ವರ, ಕೆಮ್ಮು, ಹೊಟ್ಟೆನೋವಿನ ಔಷಧಿಗಳನ್ನು ಹಾಕಿಡಿ.

 

Travel tips when travelling with kids


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...