Kannada Duniya

ಮಹಿಳೆಯರೇ ಒಬ್ಬರೇ ಪ್ರವಾಸಕ್ಕೆ ಹೊರಟಿರಾ….? ಹಾಗಾದ್ರೆ ಸ್ವಲ್ಪ ಇದನ್ನು ಓದಿ

ಪ್ರವಾಸ ಹೋಗುವುದು ಎಂದರೆ ಎಲ್ಲರಿಗೂ ಇಷ್ಟ. ಈಗಿನ ಕಾಲದಲ್ಲಿ ಮಹಿಳೆಯರು ಒಂಟಿಯಾಗಿಯೂ ದೂರದೂರಿಗೆ ಪ್ರವೇಶ ಬೆಳೆಸಬೇಕಾದ ಅನಿವಾರ್ಯತೆ ಇರುತ್ತದೆ. ಅಂಥ ಸಂದರ್ಭದಲ್ಲಿ ಮಹಿಳೆಯರು ಈ ಕೆಲವು ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸುವುದು ಮುಖ್ಯ.

ಸೋಲೋ ಪ್ರವಾಸ ಹೋಗುವ ಮಹಿಳೆಯರ ತಂಡಗಳೇ ಇರುತ್ತವೆ. ಒಂಟಿಯಾಗಿ ಹೋಗಲು ಭಯವಾಗುತ್ತದೆ ಎನ್ನುವವರು ಈ ತಂಡದೊಂದಿಗೆ ಸೇರಿಕೊಳ್ಳಬಹುದು. ಇದು ಹೊಸಬರ ಸ್ನೇಹವನ್ನೂ ಒದಗಿಸಿಕೊಡುತ್ತದೆ.

ಮಹಿಳೆಯರಿಗಾಗಿಯೇ ಪ್ರತ್ಯೇಕ ಪ್ರವಾಸಗಳನ್ನು ಆಯೋಜಿಸುವ ವಾವ್ ಕ್ಲಬ್ ನ ಜೊತೆಯಾಗಿ. ಸಾಕಷ್ಟು ಪ್ರವಾಸ ಮಾಡಿದ ಅನುಭವ ಹೊಂದಿರುವ ಬರಹಗಾರ್ತಿ ಸುಮಿತ್ರಾ ಇದರ ಮುಖ್ಯಸ್ಥರು. ಅವರು ಹಲವು ಪ್ಯಾಕೇಜ್ ಗಳ ಪ್ರವಾಸಗಳನ್ನು ಆಯೋಜಿಸುತ್ತಾರೆ.

ಇನ್ನು ಕಡಿಮೆ ಬಜೆಟ್ ನಲ್ಲಿ ಪ್ರವಾಸ ಹೋಗಬೇಕು ಎನ್ನುವವರಿಗೂ ನೆರವಾಗುವ ಆ್ಯಪ್ ಗಳಿವೆ. ಅವುಗಳ ಸಹಾಯ ಪಡೆದು ನೀವು ಸೋಲೋ ಆಗಿಯೂ ಅಂದರೆ ನಿಮಗಿಷ್ಟ ಬಂದಂತೆ ದೂರದೂರಿಗೆ ಪ್ರಯಾಣ ಬೆಳೆಸಬಹುದು.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...