Kannada Duniya

ಸಂಗಾತಿಯೊಂದಿಗೆ ರೋಮ್ಯಾಂಟಿಕ್ ಆಗಿ ಸಮಯವನ್ನು ಕಳೆಯಲು ಗೋವಾದ ಈ ಸ್ಥಳಗಳಿಗೆ ಭೇಟಿ ನೀಡಿ…!

ನಿಮ್ಮ ಸಂಗಾತಿಯೊಂದಿಗೆ ನಿಮ್ಮ ರೋಮ್ಯಾಂಟಿಕ್ ಸಮಯವನ್ನು ಕಳೆಯಲು ಬಯಸುವಿರಾ? ಗೋವಾದ ಟಾಪ್  ರೋಮ್ಯಾಂಟಿಕ್ ತಾಣಗಳು ಇಲ್ಲಿವೆ ನೋಡಿ. ನೀವು ಗೋವಾದ  ಸಮುದ್ರದ ರೆಸ್ಟೊರೆಂಟ್‌ನಲ್ಲಿ ಊಟವನ್ನು ಆನಂದಿಸಬಹುದು ಅಥವಾ ಶಾಂತ ಸೂರ್ಯಾಸ್ತವನ್ನು ಸಂಗಾತಿಯೊಂದಿಗೆ ನೋಡಬಹುದು.

ನೀವು ನಿಮ್ಮ ಸಂಗಾತಿಯೊಂದಿಗೆ ಈ ಕೆಳಕಂಡ ಸ್ಥಳಗಳಿಗೆ ತಪ್ಪದೇ ಭೇಟಿ ನೀಡಿ

Dudhsagar Waterfalls, Goa: How to Reach, Timings, Tickets | Veena World

ದೂಧಸಾಗರ ಜಲಪಾತ(Dudhsagar Waterfalls):ದೂಧ್‌ಸಾಗರ್  ಕರ್ನಾಟಕ ಮತ್ತು ಗೋವಾದ ಗಡಿಯಲ್ಲಿರುವ ಅತಿ ಎತ್ತರದ ಶಿಖರದ ಮೇಲೆ ಬೀಳುವ ಬಿಳಿ ನೀರಿನ ಜಲಪಾತವಾಗಿದೆ.  ವರ್ಷಪೂರ್ತಿ ಜನಪ್ರಿಯ ಆಕರ್ಷಣೆಯಾಗಿದ್ದರೂ, ಮಳೆಗಾಲದಲ್ಲಿ ಜಲಪಾತವು ಸೌಂದರ್ಯದಿಂದ ಕಂಗೊಳಿಸುತ್ತದೆ.

Fort Aguada Goa | Fort History & Visiting Time | Goa Tourism

ಅಗುಡಾ ಕೋಟೆ(Aguada Fort):1612 ರಲ್ಲಿ ನಿರ್ಮಿಸಲಾದ ಫೋರ್ಟ್ ಅಗುಡಾ ಗೋವಾದ ಸಿಂಕ್ವೆರಿಮ್ ಬೀಚ್‌ನಲ್ಲಿರುವ ಒಂದು ಸುಂದರವಾದ ಕೋಟೆಯಾಗಿದೆ.  ನೀವು ಕೋಟೆಯ ಆವರಣವನ್ನು ಪ್ರವೇಶಿಸುತ್ತಿದ್ದಂತೆ, ಇಲ್ಲಿ ಚಿತ್ರೀಕರಿಸಲಾದ ಹಲವಾರು ಬಾಲಿವುಡ್ ಚಲನಚಿತ್ರಗಳ ದೃಶ್ಯಗಳನ್ನು ಇದು ನಿಮಗೆ ನೆನಪಿಸುತ್ತದೆ.

Chapora Fort Goa | Fort History & Visiting Time | Goa Tourism

ಚಪೋರಾ ಕೋಟೆ(Chapora Fort): ಪ್ರವಾಸಿಗರಿಗೆ ಮತ್ತೊಂದು ಜನಪ್ರಿಯ ತಾಣವಾಗಿದ್ದು, ಈ ಕೋಟೆಯು ಚಪೋರಾ ನದಿ ಎದುರುಗಡೆ ಇದೆ ಮತ್ತು ಅದಕ್ಕೆ ಅದರ ಹೆಸರು ಬಂದಿದೆ.  ಉತ್ತಮ ಹವಾಮಾನದಲ್ಲಿ ಸೊಂಪಾದ ನೋಟಗಳನ್ನು ಆನಂದಿಸಲು ಈ ಕೋಟೆಗೆ ಸಂಜೆ ಅತ್ಯುತ್ತಮ ಸಮಯವಾಗಿದೆ

A Guide to Fontainhas, Goa's Latin Quarter

ಫಾಂಟೈನ್ಹಾಸ್ – ಪಂಜಿಮ್( Fontainhas – Panjim): ಹಳೆಯ-ಶೈಲಿಯ  ಗೋವಾದ ಅತ್ಯಂತ ರೋಮ್ಯಾಂಟಿಕ್ ಸ್ಥಳಗಳಲ್ಲಿ ಒಂದಾಗಿದ್ದು, ಇದು ತನ್ನ ಪೋರ್ಚುಗೀಸ್ ಪ್ರಭಾವವನ್ನು ವಿಶೇಷವಾಗಿ ಅದರ ವಾಸ್ತುಶಿಲ್ಪದ ಮೂಲಕ ನೀವು ನೋಡಬಹುದು, ಇದು ಅನೇಕ ಯುರೋಪಿಯನ್ ನಗರಗಳಲ್ಲಿ ಕಂಡುಬರುವ ಕಿರಿದಾದ ಮತ್ತು ಸುಂದರವಾದ ಅಂಕುಡೊಂಕಾದ ಬೀದಿಗಳು, ಹಳೆಯ ವಿಲ್ಲಾಗಳು ಇಲ್ಲಿ ಕಂಡುಬರುತ್ತದೆ ನಿಮಗೆ ಇದು ಯುರೋಪಿಯನ್ ನಗರದಲ್ಲಿ ಓಡಾಟ ನಡೆಸಿದಂತೆ ಭಾಸವಾಗುತ್ತದೆ


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...