Kannada Duniya

ಕ್ರಿಸ್ ಮಸ್ ರಜೆಗೆ ಪ್ರವಾಸಕ್ಕೆ ಹೋಗುವವರು ಈ ತಪ್ಪನ್ನು ಮಾಡಬೇಡಿ….!

ಕ್ರಿಸ್ ಮಸ್ ಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಕ್ರಿಸ್ ಮಸ್ ರಜೆ ಇರುವುದರಿಂದ ಕೆಲವರು ವಿವಿಧ ಸ್ಥಳಗಳಿಗೆ ಪ್ರವಾಸಕ್ಕೆ ಹೋಗಲು ಯೋಚಿಸುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ನಿಮ್ಮ ಪ್ರವಾಸವನ್ನು ಸ್ಮರಣೀಯವಾಗಿಸಲು ಈ ತಪ್ಪುಗಳನ್ನು ಮಾಡಬೇಡಿ.

-ಪ್ರಯಾಣ ಮಾಡುವಾಗ ಕೆಲವರು ಅಗತ್ಯವಿಲ್ಲದಿರುವ ವಸ್ತುಗಳನ್ನು ಪ್ಯಾಕ್ ಮಾಡುತ್ತಾರೆ. ಹಾಗಾಗಿ ನಿಮಗೆ ಅಗತ್ಯವಿರುವಂತಹ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಹೋಗಿ. ಓವರ್ ಪ್ಯಾಕಿಂಗ್ ಮಾಡಬೇಡಿ. ಇದರಿಂದ ನಿಮ್ಮ ಲಗೇಜ್ ತುಂಬಾ ಭಾರವಾಗುತ್ತದೆ.

-ಯಾವುದೇ ಪ್ರವಾಸಕ್ಕೆ ಹೋಗುವಾಗ ಬಜೆಟ್ ಮಾಡುವುದು ಮುಖ್ಯ. ಇದರಿಂದ ನಿಮ್ಮ ಪ್ರವಾಸದಲ್ಲಿ ಹಣದ ಸಮಸ್ಯೆ ಕಾಡಲ್ಲ. ಹಾಗೇ ನೀವು ನಿಮ್ಮ ಬಜೆಟ್ ನಲ್ಲಿ ಯೋಜಿಸಿದ ವಿಷಯಗಳನ್ನು ಮಾತ್ರ ಮಾಡಿ. ಇಲ್ಲವಾದರೆ ಸಮಸ್ಯೆಯಾಗಬಹುದು.

ನೀವು ಭಾರತದಲ್ಲಿಯೂ ಅದ್ಭುತ ಐಷಾರಾಮಿ ಕ್ರೂಸ್ ಸವಾರಿಗಳನ್ನು ಆನಂದಿಸಬಹುದು…!

-ನೀವು ಪ್ರವಾಸದ ಸಮಯದಲ್ಲಿ ಹೆಚ್ಚು ನಿದ್ರೆ ಮಾಡಬೇಡಿ. ಯಾಕೆಂದರೆ ಇದರಿಂದ ನೀವು ವಿವಿಧ ಸ್ಥಳಗಳಿಗೆ ಹೋಗಲು ಆಗುವುದಿಲ್ಲ. ಪ್ರವಾಸದ ಮಜಾವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಿದ್ರೆ ಕಡಿಮೆ ಮಾಡಿ ವಿವಿಧ ಸ್ಥಳಗಳಿಗೆ ತೆರಳಿ ಅಲ್ಲಿನ ಸೌಂದರ್ಯವನ್ನು ಸವಿಯಿರಿ.

-ಕೆಲವರು ಹೊರಗಡೆ ಆಹಾರವನ್ನು ಇಷ್ಟಪಡುತ್ತಾರೆ. ಹಾಗಾಗಿ ಹೊರಗಡೆ ಹೋದಾಗ ಅಲ್ಲಿನ ಸ್ಥಳೀಯ ಆಹಾರವನ್ನು ಸೇವಿಸಿ. ಇದರಿಂದ ನಿಮಗೆ ಖುಷಿ ಸಿಗುತ್ತದೆ. ಆದರೆ ಅತಿಯಾಗಿ ಸೇವಿಸಬೇಡಿ. ಇದರಿಂದ ಆರೋಗ್ಯ ಸಮಸ್ಯೆ ಕಾಡಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...