Kannada Duniya

ವಯಸ್ಸು ಮೂವತ್ತರ ಗಡಿ ದಾಟುವ ಮೊದಲೇ ಮಾಡಬೇಕಾದ ಕೆಲಸಗಳಿವು!

ವಯಸ್ಸು ಮೂವತ್ತರ ಗಡಿ ದಾಟುವ ಮುನ್ನವೇ ಈ ಕೆಲವು ವಿಚಾರಗಳಲ್ಲಿ ನೀವು ಹಿಡಿತ ಸಾಧಿಸಿದ್ದರೆ ಮುಂದಿನ ಬದುಕು ಹಸನಾಗುವುದು ನಿಶ್ಚಿತ. ಹಾಗಾದ್ರೆ ಅವು ಯಾವುದು ಎಂದು ಯೋಚಿಸುತ್ತಿದ್ದೀರಾ…? ಇಲ್ಲಿದೆ ನೋಡಿ ಇದರ ಸಂಪೂರ್ಣ ಮಾಹಿತಿ.

ಮೂವತ್ತರ ವಯಸ್ಸಿನಲ್ಲಿ ನಿವೃತ್ತರಾಗಲು ಇನ್ನೂ ಸುದೀರ್ಘಕಾಲವಿದೆ. ಈಗಲೇ ಆ ಬಗ್ಗೆ ಆಲೋಚಿಸುವುದು ಯಾಕೆ ಎನಿಸುವುದು ಸಹಜ. ಆದರೆ ಆ ರೀತಿ ಯೋಚಿಸುವ ಬದಲು 30ರಿಂದಲೇ ಹಣವನ್ನು ಸೇವ್ ಮಾಡುತ್ತಾ ಬಂದರೆ ವೃದ್ಧಾಪ್ಯದ ವೇಳೆ ನಿಮ್ಮ ಕೈತುಂಬಾ ಹಣವಿರುತ್ತದೆ.

ಮನೆ ಖರೀದಿಸುವುದು ಪ್ರತಿಯೊಬ್ಬರ ಕನಸು. 30ರೊಳಗೆ ನೀವು ಮನೆ ಖರೀದಿಸಿದರೆ ಮುಂದಿನ 10-20 ವರ್ಷಗಳಲ್ಲಿ ಇಎಂಐ ಅಥವಾ ಗೃಹ ಸಾಲ ಮುಗಿದು ನಿವೃತ್ತಿ ವೇಳೆಗೆ ನೀವು ಸ್ವಂತ ಮನೆಯಲ್ಲಿರಬಹುದು.

ಜೀವವಿಮೆಯಂತಹ ಹೂಡಿಕೆಗಳಲ್ಲಿ ತೊಡಗುವಾಗಲೂ ಅಷ್ಟೇ ಮೂವತ್ತರೊಳಗೆ ನೀವು ಪ್ರೀಮಿಯಂ ಕಟ್ಟಲು ಆರಂಭಿಸಿದರೆ ಅದರ ಮೊತ್ತ ಬಹಳ ಕಡಿಮೆಯಿರುತ್ತದೆ. ಮತ್ತು ಇದು ಹೆಚ್ಚಿನ ಲಾಭ ನೀಡುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...