Kannada Duniya

ಮೊಬೈಲ್ ಹಾಗೂ ಕಣ್ಣು, ಸಮತೋಲನ ಹೇಗೆ?

ಅತಿಯಾಗಿ ಮೊಬೈಲ್ ನೋಡುವುದರಿಂದ ಕಣ್ಣುಗಳಿಗೆ ಸಮಸ್ಯೆಯಾಗಬಹುದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಕೆಲವೊಮ್ಮೆ ಇದು ಅನಿವಾರ್ಯವಾಗಿರಬಹುದು. ಉದ್ಯೋಗದ ನಿಮಿತ್ತವೂ ನೀವು ಸಣ್ಣ ಪರದೆಯನ್ನು ನೋಡುತ್ತಲೇ ಇರಬೇಕಾಗಬಹುದು.

ಇಂಥ ಸಂದರ್ಭದಲ್ಲಿ ಕಣ್ಣುಗಳನ್ನು ಆಗಾಗ್ಗೆ ಮಿಟುಕಿಸಿ. ಸ್ಮಾರ್ಟ್ ಫೋನ್ ಗಳನ್ನು ನೋಡುವ ಮಧ್ಯೆ ಮಧ್ಯೆ ಕಣ್ಣು ಮಿಟುಕಿಸುತ್ತಿರುವುದರಿಂದ ಶುಷ್ಕತೆ ಉಳಿಯುತ್ತದೆ ಮತ್ತು ಗಮನ ಕೇಂದ್ರೀಕರಿಸುವುದು ಸುಲಭವಾಗುತ್ತದೆ. ಕನಿಷ್ಠ 15 ನಿಮಿಷಗಳಿಗೊಮ್ಮೆ ಮರೆಯದೆ ಹೀಗೆ ಮಾಡಿ.

20-20-20 ನಿಯಮ ಅನುಸರಿಸಿ. ಅಂದರೆ ಪ್ರತಿ ಇಪ್ಪತ್ತು ನಿಮಿಷಗಳಿಗೊಮ್ಮೆ 20 ಸೆಕೆಂಡ್ ಗಳ ಕಾಲ 20 ಅಡಿ ದೂರದಲ್ಲಿರುವ ವಸ್ತುವನ್ನು ವೀಕ್ಷಿಸಿ. ಇದು ಕಣ್ಣುಗಳಿಗೆ ವಿಶ್ರಾಂತಿ ನೀಡುತ್ತದೆ.

ಮೊಬೈಲ್ ಸ್ಕ್ರೀನ್ ನ ಬ್ರೈಟ್ ನೆಸ್ ಸೆಟ್ ಮಾಡಿಕೊಳ್ಳಿ. ಇದನ್ನು ಸಾಧ್ಯವಾದಷ್ಟು ಕಡಿಮೆ, ಅಂದರೆ ಪೂರಾ ಕತ್ತಲಾಗುವಷ್ಟೂ ಅಲ್ಲ, ನಿಮ್ಮ ಕಣ್ಣಿಗೆ ಹೊಂದಿಕೆಯಾಗುವಷ್ಟು ಇಟ್ಟುಕೊಳ್ಳಿ.

ಫಾಂಟ್ ಆಥವಾ ಅಕ್ಷರಗಳ ಗಾತ್ರವನ್ನು ಹೆಚ್ಚಿಸಿ. ಸಾಮಾನ್ಯವಾಗಿ ಎಲ್ಲಾ ಮೊಬೈಲ್ ಗಳಲ್ಲೂ ಇರುವ ಈ ಆಯ್ಕೆಯನ್ನು ಸೆಟ್ ಮಾಡಿಕೊಳ್ಳಿ. ಇದರಿಂದ ಓದುವುದು ಸುಲಭವಾಗುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...