Kannada Duniya

ಒಂಟಿಯಾಗಿ ಮಲಗುವುದು ಅಥವಾ ಜೊತೆಯಲ್ಲಿ ಮಲಗುವುದು ಇದರಲ್ಲಿ ಯಾವುದು ಒಳ್ಳೆಯದು

ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿಯಲ್ಲಿ ಅನೇಕ ಬದಲಾವಣೆಗಳಾಗಿವೆ, ನಮ್ಮ ಕೆಟ್ಟ ಆಹಾರ ಪದ್ಧತಿ ಮತ್ತು ಒತ್ತಡದ ಜೀವನಶೈಲಿಯಿಂದಾಗಿ ನಿದ್ರೆಯ ಸಮಸ್ಯೆ ಕೂಡ ಕಾಡುತ್ತಿದೆ. ಇದರಿಂದ ದೇಹ ಹಲವು ರೋಗಗಳಿಗೆ ತುತ್ತಾಗುತ್ತಿದೆ. ಹಾಗಾಗಿ ನಿಮಗೆ ನಿದ್ರೆ ಸರಿಯಾಗಿ ಬರಲು ಒಂಟಿಯಾಗಿ ಮಲಗುವುದು ಅಥವಾ ಜೊತೆಯಾಗಿ ಮಲಗುವುದು ಯಾವುದು ಉತ್ತಮ ಎಂಬುದನ್ನು ತಿಳಿಯಿರಿ.

ಒಂಟಿಯಾಗಿ ಮಲಗುವುದರಿಂದ ನಿದ್ರೆ ಚೆನ್ನಾಗಿ ಬರುತ್ತದೆ ಎಂಬುದು ಎಲ್ಲರ ನಂಬಿಕೆ. ಯಾಕೆಂದರೆ ಗೊರಕೆ ಹೊಡೆಯುವ ಅಥವಾ ಹೊರಾಳುಡುವಂತಹ ಸಂಗಾತಿ ಇದ್ದರೆ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗೇ ಫ್ಯಾನ್ ,ಎಸಿಗಾಗಿ ಜಗಳವಾಡುವ ಅಗತ್ಯವಲ್ಲ. ಹಾಗಾಗಿ ಇದರಿಂದ ನಿದ್ರೆ ಉತ್ತಮವಾಗಿ ಬರುತ್ತದೆ ಎನ್ನಲಾಗುತ್ತದೆ.

ಆದರೆ ಸಂಶೋಧನೆಯೊಂದರ ಪ್ರಕಾರ ಒಂಟಿಯಾಗಿ ಮಲಗುವವರಿಗಿಂತ ಸಂಗಾತಿಯ ಜೊತೆಯಾಗಿ ಮಲಗುವವರು ಉತ್ತಮ ನಿದ್ರೆಯನ್ನು ಪಡೆಯುತ್ತಾರೆ ಎಂಬುದಾಗಿ ತಿಳಿದುಬಂದಿದೆ. ಯಾಕೆಂದರೆ ಸಂಗಾತಿಯೊಂದಿಗೆ ಮಲಗುವುದರಿಂದ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಒಟ್ಟಿಗೆ ಮಲಗುವ ದಂಪತಿಗಳು ಕಡಿಮೆ ಖಿನ್ನತೆ, ಆತಂಕ, ಒತ್ತಡದಿಂದ ದೂರವಿರುತ್ತಾರಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...