Kannada Duniya

ನೀವು ಸಂಬಂಧದಲ್ಲಿ ಇದ್ದೀರಾ…?… ಫ್ಲರ್ಟ್ ಮಾಡುವ ಮುನ್ನ ಯೋಚಿಸಿ….!

ನೀವು ಇನ್ನೊಬ್ಬರನ್ನು ಪ್ರೀತಿಸುತ್ತಿರುವ ವೇಳೆಯೂ ಫ್ಲರ್ಟ್ ಮಾಡುವುದನ್ನು ಇಷ್ಟಪಡುತ್ತೀರಾ? ಇದರ ಸರಿ-ತಪ್ಪುಗಳ ಬಗ್ಗೆ ಎಂದಾದರೂ ಯೋಚಿಸಿದ್ದೀರಾ?

ಫ್ಲರ್ಟ್ ಮಾಡುವುದು ಅಂದರೆ ಇತರರ ಕಾಲೆಳೆಯುವುದು ಎಲ್ಲರಿಗೂ ಇಷ್ಟದ ಕೆಲಸವೇ.ಆದರೆ ನೀವು ಈಗಾಗಲೇ ಸಂಬಂಧದಲ್ಲಿ ಇದ್ದಾಗ ಅಥವಾ ನಿಮ್ಮ ಸಂಗಾತಿಯ ಜೊತೆಗಿದ್ದಾಗ ಹೀಗೆ ಮಾಡುವುದರಿಂದ ಅವರ ಮನಸ್ಸಿನ ಮೇಲೆ ಯಾವ ಪರಿಣಾಮ ಬೀರಬಹುದು ಎಂಬುದನ್ನು ಆಲೋಚಿಸುವುದು ಮುಖ್ಯವಾಗುತ್ತದೆ. ನಿಮ್ಮ ಸಂಗಾತಿ ಸಂಪೂರ್ಣವಾಗಿ ನಿಮ್ಮನ್ನು ಅರ್ಥ ಮಾಡಿಕೊಂಡಿದ್ದರೆ ಇದರಿಂದ ಯಾವುದೇ ಸಮಸ್ಯೆಯಾಗದು. ಆದರೆ ಕೆಲವೊಮ್ಮೆ ಅತಿರೇಕದ ಹಾಸ್ಯವು ಸಮಸ್ಯೆಯನ್ನು ತಂದೊಡ್ಡಬಹುದು ಎಂಬುದು ನಿಮಗೆ ನೆನಪಿರಲಿ.

ಇತರರು ನಿಮ್ಮ ಫ್ಲರ್ಟಿಂಗ್ ಅನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆಯೂ ಇದೆ. ಇದರಿಂದಾಗಿಯೂ ನಿಮ್ಮ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಇದು ಅಹಿತಕರ ಸನ್ನಿವೇಶಗಳನ್ನು ಸೃಷ್ಟಿಸಬಹುದು. ಹಾಗಾಗಿ ಮಾಡುವ ಮುನ್ನ ಸಂದರ್ಭ ಸನ್ನಿವೇಶಗಳನ್ನು ಗಮನಿಸಿಕೊಂಡಿರಿ.

ಸಂಗಾತಿಯನ್ನು ಅರ್ಥೈಸಿಕೊಳ್ಳುವ ‘ಸರಳ’ ವಿಧಾನ ಇದು

ನಿಮ್ಮ ಸಂಗಾತಿಗೆ ಇದು ನೀವು ಅವರೊಂದಿಗೆ ಚೆಲ್ಲಾಟ ಆಡುತ್ತಿದ್ದೀರಿ ಎಂಬ ತಪ್ಪು ಭಾವನೆಯನ್ನು ಕೊಡದಿರಲಿ. ಹಾಗಾಗಿ ಫ್ಲರ್ಟಿಂಗ್ ನಿಮ್ಮ ಹವ್ಯಾಸವೇ ಆಗಿದ್ದರೂ, ಕೆಲವೊಮ್ಮೆ ಅದರಿಂದ ದೂರವಿರುವುದು ಒಳ್ಳೆಯದು.

 

Stop flirting with others if you are in a relationship


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...