Kannada Duniya

ತ್ವಚೆಯ ಸುಕ್ಕು ನಿವಾರಿಸಿಕೊಳ್ಳಬೇಕೆ…?ಈ ಟಿಪ್ಸ್ ಟ್ರೈ ಮಾಡಿ

ಸಣ್ಣ ವಯಸ್ಸಿನಲ್ಲೇ ನಿಮ್ಮ ಮುಖದ ಮೇಲೆ ಸುಕ್ಕುಗಳು ಕಾಣಿಸಿಕೊಂಡಿವೆಯೇ? ಇದಕ್ಕೆ ಕಾರಣಗಳೇನಿರಬಹುದು ಮತ್ತು ಪರಿಹಾರವೇನು ಎಂಬ ಚಿಂತೆಯಲ್ಲಿದ್ದೀರಾ….?ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್. ಇದನ್ನು ಟ್ರೈ ಮಾಡಿದರೆ ಸುಕ್ಕುಗಳನ್ನು ಸುಲಭವಾಗಿ ನಿವಾರಿಸಿಕೊಲ್ಳಬಹುದು.

ನಿತ್ಯ ಬಿಸಿಲಿಗೆ ಒಡ್ಡಿಕೊಳ್ಳುವ ತ್ವಚೆ ಬಹುಬೇಗ ಸುಕ್ಕಾಗುತ್ತದೆ. ಅದಕ್ಕಾಗಿ ಮನೆಯಿಂದ ಹೊರಹೋಗುವಾಗ ಟೊಪ್ಪಿ ಇಲ್ಲವೇ ಮಾಸ್ಕ್ ಧರಿಸುವುದು, ಕಾಲುಗಳಿಗೆ ಸಾಕ್ಸ್ ಅಥವಾ ಶೂ ಧರಿಸುವುದು ಒಳ್ಳೆಯದು. ಮನೆಯಿಂದ ಹೊರಹೋಗುವ ಮುನ್ನ ಮಾಯಿಸ್ಚರೈಸರ್ ಹಚ್ಚಿಕೊಳ್ಳುವುದು ಕೂಡಾ ಬಹಳ ಮುಖ್ಯ.

ದಿನವಿಡೀ ಸಾಕಷ್ಟು ನೀರು ಕುಡಿಯುವ ಮೂಲಕ ನಿಮ್ಮ ತ್ವಚೆಯನ್ನು ಹಲವು ಹಾನಿಕಾರಕ ಅಂಶಗಳಿಂದ ರಕ್ಷಿಸಿಕೊಳ್ಳಬಹುದು. ತ್ವಚೆಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಅಂದರೆ ಸುಕ್ಕಾಗುವುದು, ಒಣಗುವುದು ಮೊದಲಾದವುಗಳನ್ನು ನೀರು ನಿವಾರಿಸಬಲ್ಲದು.

ಸಮತೋಲನ ಆಹಾರ ಪದ್ಧತಿಯೂ ಬಹಳ ಮುಖ್ಯ. ಸಾಧ್ಯವಾದಷ್ಟು ಮನೆಯಲ್ಲೇ ತಯಾರಿಸಿ, ಕಡಿಮೆ ಮಸಾಲೆ ಬೆರೆಸಿದ ಪ್ರೊಟೀನ್, ಕಾರ್ಬೋಹೈಡ್ರೇಟ್, ಹಣ್ಣು ತರಕಾರಿಗಳ ಸೇವನೆಯಿಂದಲೂ ತ್ವಚೆಯನ್ನು ಆಕರ್ಷಕವಾಗಿ ಇಟ್ಟುಕೊಳ್ಳಬಹುದು.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...