Kannada Duniya

ತಪ್ಪು ಮಾಡಿದ ಮಕ್ಕಳನ್ನು ಹೀಗೆ ಶಿಕ್ಷಿಸಿ!

ಮಕ್ಕಳು ಸಣ್ಣ ಪುಟ್ಟ ತಪ್ಪುಗಳನ್ನು ಮಾಡುತ್ತಿರುತ್ತಾರೆ. ಹಾಗಾಗಿ ಪೋಷಕರು ಅವರು ತಪ್ಪು ಮಾಡಿದಾಗಲೆಲ್ಲಾ ಅವರಿಗೆ ಹೊಡೆಯುವ , ಬೈಯುವಂತಹ ಶಿಕ್ಷೆ ನೀಡುತ್ತಾರೆ. ಇದರಿಂದ ಮಕ್ಕಳು ತಮ್ಮ ತಪ್ಪನ್ನು ಮತ್ತಷ್ಟು ಹೆಚ್ಚು ಮಾಡುತ್ತವೆ. ಹಾಗಾಗಿ ಮಕ್ಕಳು ತಪ್ಪು ಮಾಡಿದಾಗ ಅವರಿಗೆ ಹೀಗೆ ಶಿಕ್ಷೆ ನೀಡಿ.

ಮಕ್ಕಳಿಗೆ ಆ ಕೆಲಸ ಮಾಡಬೇಡಿ ಇದರಿಂದ ನಿಮಗೆ ತೊಂದರೆಯಾಗುತ್ತದೆ ಎಂದು ಎಷ್ಟು ಹೇಳಿದರೂ ಅವರು ಕೇಳುವುದಿಲ್ಲ. ಹಾಗಾಗಿ ಅದಕ್ಕಾಗಿ ನೀವು ಕೂಗಾಡುವ ಬದಲು ಅವರಿಗೆ ಆ ಕೆಲಸ ಮಾಡಲು ಬಿಡಿ. ನಂತರ ಅದರಿಂದ ತೊಂದರೆಯಾದರೆ ಅದನ್ನು ಅವರು ಮತ್ತೆ ಮಾಡುವುದಿಲ್ಲ.

ಹಾಗೇ ಮಕ್ಕಳು ತಿನ್ನಲು ನಿರಾಕರಿಸಿದರೆ ಅವರಿಗೆ ಒತ್ತಾಯ ಮಾಡಿ ತಿನ್ನಿಸಬೇಡಿ. ಬದಲಾಗಿ ಅವರನ್ನು ಹಾಗೇ ಬಿಡಿ. ನಂತರ ಹೊಟ್ಟೆ ಹಸಿವಾದಾಗ ಅವರೇ ಬಂದು ಊಟ ಕೇಳುವ ತನಕ ಊಟ ನೀಡಬೇಡಿ. ಇದರಿಂದ ಅವರು ಆಹಾರದ ಬೆಲೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ.

ಮಕ್ಕಳು ಯಾವುದೇ ಕಿಡಿಗೇಡಿತನ ಮಾಡಿದರೆ ಅವರಿಗೆ ಶಿಕ್ಷೆ ನೀಡಬೇಡಿ. ಬದಲಾಗಿ ಅವರ ಕಡೆ ಗಮನವನ್ನು ನೀಡಬೇಡಿ. ಅವರನ್ನು ನಿರ್ಲಕ್ಷ್ಯ ಮಾಡಿ. ಇದರಿಂದ ಅವರು ಬೇಸರಗೊಂಡು ಮತ್ತೆ ಆ ತಪ್ಪನ್ನು ಮಾಡುವುದಿಲ್ಲ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...