Kannada Duniya

ವೈವಾಹಿಕ ಜೀವನದಲ್ಲಿ ಕೋಪವನ್ನು ನಿಗ್ರಹಿಸಲು ಈ ಸಲಹೆ ಪಾಲಿಸಿ

ದಂಪತಿಗಳ ನಡುವೆ ಜಗಳ, ಕೋಪ ಸಾಮಾನ್ಯ. ಆದರೆ ಇದು ವಿಕೋಪಕ್ಕೆ ಹೋಗಬಾರದು. ಇದರಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ನಿಮ್ಮ ವೈವಾಹಿಕ ಜೀವನ ಸುಖಕರವಾಗಿರಲು ನಿಮ್ಮ ಕೋಪವನ್ನು ನಿಗ್ರಹಿಸಬೇಕು. ಅದಕ್ಕಾಗಿ ಈ ಕ್ರಮಗಳನ್ನು ಪಾಲಿಸಿ.

ಪತಿ ಅಥವಾ ಪತ್ನಿ ಇಬ್ಬರಲ್ಲಿ ಯಾರಾದರೂ ಒಬ್ಬರು ಕೋಪಗೊಂಡಿದ್ದರೆ ಮತ್ತೊಬ್ಬರು ಶಾಂತವಾಗಿರಿ. ಕೋಪಗೊಂಡವರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿ. ಇದರಿಂದ ಅವರ ಕೋಪ ಕಡಿಮೆಯಾಗುತ್ತದೆ.

ಹಾಗೇ ಅವರ ಕೋಪಕ್ಕೆ ಕಾರಣವೇನು ಎಂಬುದನ್ನು ಕುಳಿತುಕೊಂಡು ಚರ್ಚಿಸಿ. ಇದರಿಂದ ಒಬ್ಬರ ಬಗ್ಗೆ ಒಬ್ಬರು ಅರ್ಥಮಾಡಿಕೊಳ್ಳಬಹುದು.

ಹಾಗೇ ಸಂಗಾತಿ ಕೋಪಗೊಂಡಿದ್ದರೆ ಅದಕ್ಕೆ ಕಾರಣವನ್ನು ಬಹಿರಂಗವಾಗಿ ಕೇಳಬೇಡಿ. ಬದಲಾಗಿ ಕೋಣೆಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಚರ್ಚಿಸಿ. ಇಲ್ಲವಾದರೆ ಇದರಿಂದ ಕೋಪ ಹೆಚ್ಚಾಗಬಹುದು.

ನಿಮ್ಮ ಕೋಪವನ್ನು ನಿಗ್ರಹಿಸಲು ಕಷ್ಟವಾದರೆ ಮನಶಾಸ್ತ್ರಜ್ಞರ ಸಲಹೆಯನ್ನು ಪಡೆದುಕೊಳ್ಳಿ. ಅಥವಾ ನಿಮ್ಮ ಹಿರಿಯರಲ್ಲಿ ಸಲಹೆ ಕೇಳಿ. ಆದರೆ ಈ ವಿಚಾರವನ್ನು ನಿಮ್ಮ ಸ್ನೇಹಿತರು ಅಥವಾ ಹೊರಗಿನವರ ಜೊತೆ ಚರ್ಚಿಸಬೇಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...