Kannada Duniya

ವೈಮನಸ್ಸಿಗೆ ಮಕ್ಕಳು ಕಾರಣರಲ್ಲ ಹೇಗೆ ಗೊತ್ತಾ…?

ಮಕ್ಕಳಾದ ಮೇಲೆ ದಂಪತಿಗಳ ಮಧ್ಯೆ ಹಲವು ವಿಷಯಗಳಲ್ಲಿ ವೈಮನಸ್ಸುಗಳು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಮಗು ಕಾರಣವಲ್ಲ, ಸಂಗಾತಿಗಳು ಸರಿಯಾಗಿ ಕೆಲಸಗಳನ್ನು ನಿರ್ವಹಿಸದೆ ಇರುವುದೇ ಕಾರಣ ಎಂಬುದನ್ನು ಮರೆತುಬಿಡುತ್ತಾರೆ.

ಇಂಥ ಸಂದರ್ಭದಲ್ಲಿ ಪರಸ್ಪರ ದೋಷಾರೋಪಣೆ ಮಾಡಿಕೊಳ್ಳುವ ಬದಲು ಮಗು ಮಲಗಿರುವ ವೇಳೆಯಲ್ಲಾದರೂ ನೀವು ಸಂಗಾತಿಯ ಜೊತೆ ಖುಷಿಯಿಂದ ಸಮಯ ಕಳೆಯಬಹುದು. ಮಗುವಿನ ಆರೈಕೆಯ ವಿಷಯಕ್ಕೆ ಬಂದಾಗ ತಾನು ಹೇಳಿದ್ದೇ ನಡೆಯಬೇಕು ಎಂಬ ಹಠ ಬಿಟ್ಟು ಕೆಲಸ ಸುಲಭವಂಥ ಯೋಜನೆಗಳನ್ನು ಒಪ್ಪಿಕೊಳ್ಳಿ.

ಹಣಕಾಸಿನ ವಿಷಯದಲ್ಲಿ ಹೆಚ್ಚು ಎಚ್ಚರ ವಹಿಸಬೇಕು. ಮಗು ಬಂದ ಬಳಿಕ ಮನೆಯ ಖರ್ಚು ವೆಚ್ಚಗಳು ಹೆಚ್ಚುವುದು ಸಾಮಾನ್ಯ. ಈ ವಿಷಯವನ್ನು ಇಬ್ಬರೂ ಅರ್ಥ ಮಾಡಿಕೊಳ್ಳಬೇಕು. ಇದಕ್ಕೆ ತಕ್ಕುದಾದ ಯೋಜನೆಗಳನ್ನು ಹಾಕಿಕೊಳ್ಳಬೇಕು.

ಸುಖೀ ‘ದಾಂಪತ್ಯದ’ ಸರಳ ಸೂತ್ರಗಳು ಇಲ್ಲಿವೆ

ಮಗುವಿಗೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆಗ ನಿನ್ನ ಕಾರಣಕ್ಕೇ ಹೀಗಾಗಿದೆ ಎಂದು ದೂರಿ ಸಂಗಾತಿಯ ಮನಸ್ಸನ್ನು ನೋಯಿಸುವ ಬದಲು ಮಗುವಿನ ಆರೈಕೆಯ ಕಡೆಗೆ ಗಮನ ಕೊಡಿ. ಯಾವುದೇ ಕಾರಣಕ್ಕೆ ಸಂಗಾತಿಯ ಮೇಲೆ ಅನುಮಾನ ಪಡದಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...