Kannada Duniya

ಯಾರೂ ಹೇಳದ ಹನಿಮೂನ್ ಸೀಕ್ರೆಟ್ ಗಳು ಇಲ್ಲಿದೆ ನೋಡಿ….ಮಿಸ್ ಮಾಡದೇ ಓದಿ!

ಮಧುಚಂದ್ರ ಎನ್ನುವುದು ಮದುಮಕ್ಕಳಿಗೆ ವಿಶೇಷವಾದದ್ದು. ಒಂದಷ್ಟು ದಿನ ಖುಷಿಯಿಂದ ಯಾರ ಹಂಗಿಲ್ಲದೇ ಪ್ರಣಯದ ಪಕ್ಷಿಗಳಂತೆ ಖುಷಿಯಿಂದ ಇರುವುದಕ್ಕೆ ಇದರಿಂದ ಸಾಧ್ಯವಾಗುತ್ತದೆ. ಆದರೆ ಮದುವೆಗೆ ಮೊದಲೇ ಹನಿಮೂನ್ ಸ್ಪಾಟ್ ನಿರ್ಧರಿಸಿ, ಮದುವೆಯಾದ ತಕ್ಷಣ ಅಂದರೆ ಒಂದೆರಡು ದಿನಗಳಲ್ಲಿ
ಹನಿಮೂನ್ ಗೆ ತೆರಳುವ ಜೋಡಿಗಳಿಗೆ ಒಂದಷ್ಟು ಟಿಪ್ಸ್ ಗಳಿವೆ.

ಮದುವೆಯಾದ ತಕ್ಷಣ ನೀವು ಪ್ರವಾಸ ಹೊರಡುವುದರ ಬದಲು ಕನಿಷ್ಠ ಒಂದು ವಾರದ ಅಂತರ ಇಟ್ಟುಕೊಳ್ಳಿ. ವಿವಾಹ ಕಾರ್ಯಕ್ರಮಗಳ ದಣಿವು ಮೂರು ನಾಲ್ಕು ದಿನಗಳ ತನಕ ಇರುವುದರಿಂದ ಹನಿಮೂನ್ ಗೆ ತೆರಳಿದ ಸಂದರ್ಭದಲ್ಲಿ ವಿಪರೀತ ಸುಸ್ತಾಗುವ ಸಂಭವವಿದೆ.

ಈ ಅವಧಿಯನ್ನು ಹೊಸ ಜಾಗಗಳನ್ನು ನೋಡುವುದು, ಎಂಜಾಯ್ ಮಾಡುವುದು ಸಾಧ್ಯವಾಗದೆ ಹೋಗಬಹುದು. ಹಾಗಾಗಿ ಒಂದು ವಾರದ ಬಳಿಕ, ಮದುವೆಯ ಸುಸ್ತು ದೂರವಾದ ಬಳಿಕವೇ ಪ್ರವಾಸ ಹೊರಡಿ.

ಇನ್ನು ಕೆಲವರಿಗೆ ಹೊಸ ಸ್ಥಳಕ್ಕೆ ಹೋದ ತಕ್ಷಣ ಅನಾರೋಗ್ಯ ಕಾಣಿಸಿಕೊಳ್ಳಬಹುದು. ಇದನ್ನು ತಪ್ಪಿಸಲು ಅಗತ್ಯವಾದ ಮೆಡಿಸಿನ್ ಕಿಟ್ ಕೊಂಡೊಯ್ಯಿರಿ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ನಿಮ್ಮ ಬಳಿಯೇ ಪರಿಹಾರವಿರಲಿ. ಹೊಸ ಊರಿನಲ್ಲಿ ವೈದ್ಯರನ್ನು ಹುಡುಕುವುದು ಕೂಡಾ ಕಷ್ಟವಾಗಬಹುದು.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...