Kannada Duniya

ಮಕ್ಕಳು ಅಧ್ಯಯನ ಮಾಡುವಾಗ ಕೋಪಗೊಂಡರೆ ಅವರನ್ನು ಹೀಗೆ ಸಮಾಧಾನಪಡಿಸಿ

ಪೋಷಕರಿಗೆ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಚಿಂತೆ ಕಾಡುತ್ತಿರುತ್ತದೆ. ಹಾಗಾಗಿ ಮಕ್ಕಳಿಗೆ ಓದಲು ಬರೆಯಲು ಹೇಳುತ್ತಿರುತ್ತಾರೆ. ಆದರೆ ಮಕ್ಕಳಿಗೆ ಓದುವುದಕ್ಕಿಂತ ಆಟವಾಡುವುದರಲ್ಲೇ ಹೆಚ್ಚು ಆಸಕ್ತಿ ಇರುತ್ತದೆ. ಹಾಗಾಗಿ ಅವರು ಓದಲು ಹೇಳಿದ್ದಾಗ ಕೋಪಗೊಳ್ಳುತ್ತಾರೆ. ಹಾಗಾಗಿ ಮಕ್ಕಳು ಅಧ್ಯಯನ ಮಾಡುವಾಗ ಕೋಪಗೊಂಡರೆ ಅವರನ್ನು ಹೀಗೆ ಸಮಾಧಾನಪಡಿಸಿ

ಮಕ್ಕಳು ಓದಲು ಹಠ ಮಾಡಿದರೆ ಅವರಿಗೆ ಶಿಕ್ಷಣದ ಮಹತ್ವವನ್ನು ಅರ್ಥಮಾಡಿಸಿ. ಭವಿಷ್ಯದಲ್ಲಿ ಶಿಕ್ಷಣ ಎಷ್ಟು ಮುಖ್ಯ ಎನ್ನುವುದನ್ನು ತಿಳಿಸಿ.

ಮಕ್ಕಳು ಶಿಕ್ಷಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಯತ್ನಗಳನ್ನು ಮಾಡಿದರೆ ಅದನ್ನು ಪ್ರಶಂಸೆ ಮಾಡಿ. ಅವರನ್ನು ಪ್ರೋತ್ಸಾಹಿಸಿ. ಇದರಿಂದ ಮಕ್ಕಳಿಗೆ ಶಿಕ್ಷಣದ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆಯಂತೆ.

ಮಕ್ಕಳಿಗೆ ಅಧ್ಯಯನದ ಬಗ್ಗೆ ತಮ್ಮ ಗಮನವನ್ನು ಕೇಂದ್ರೀಕರಿಸಲು ಅವರಿಗೆ ಆರೋಗ್ಯಕರವಾದ ಆಹಾರವನ್ನು ನೀಡಿ.

ಹಾಗೇ ಮಕ್ಕಳಿಗೆ ಸಾಕಷ್ಟು ನಿದ್ರೆ ಮಾಡುವಂತೆ ನೋಡಿಕೊಳ್ಳಿ. ಇದರಿಂದ ಅವರಿಗೆ ಅಧ್ಯಯನದ ಬಗ್ಗೆ ಗಮನಕೊಡಲು ಸಾಧ್ಯವಾಗುತ್ತದೆಯಂತೆ.

ಅಲ್ಲದೇ ಮಕ್ಕಳಿಗೆ ಅಧ್ಯಯನ ಮಾಡಲು ಸರಿಯಾದ ಸ್ಥಳವನ್ನು ಆರಿಸಿ. ಅಲ್ಲಿ ಗಾಳಿ, ಬೆಳಕು ಉತ್ತಮವಾಗಿರುವಂತೆ ನೋಡಿಕೊಳ್ಳಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...