Kannada Duniya

ಪೋಷಕರ ಈ ಅಭ್ಯಾಸದಿಂದ ಮಗುವನ್ನು ಸ್ಮಾರ್ಟ್ ಆಗಿ ಮಾಡಬಹುದಂತೆ

ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡುವುದು ಪೋಷಕರ ಜವಾಬ್ದಾರಿಯಾಗಿದೆ. ಅಲ್ಲದೇ ಮಕ್ಕಳನ್ನು ಚುರುಕಾಗಿಸುವ ಸಾಮರ್ಥ್ಯ ಕೂಡ ಪೋಷಕರ ಕೈಯಲ್ಲಿದೆ. ಹಾಗಾಗಿ ಪೋಷಕರು ನಿಮ್ಮ ಮಗುವನ್ನು ಸ್ಮಾರ್ಟ್ ಆಗಿಸಲು ಈ ಸಲಹೆ ಪಾಲಿಸಿ.

ಮಕ್ಕಳಿಗೆ ಕುತೂಹಲವನ್ನು ಕೆರಳಿಸುವಂತಹ ಪ್ರಶ್ನೆಗಳನ್ನು ಕೇಳಿ. ಕೆಲವು ರಹಸ್ಯಗಳನ್ನು ಪರಿಹರಿಸುವಂತಹ ಟಾಸ್ಕ್ ಗಳನ್ನು ನೀಡಿ. ಇದರಿಂದ ಅವರು ಹೊಸ ಹೊಸ ವಿಚಾರಗಳನ್ನು ಕಲಿಯುತ್ತಾರೆ ಮತ್ತು ಅರ್ಥಮಾಡಿಕೊಳ್ಳುತ್ತಾರೆ.

ಮಕ್ಕಳಿಗೆ ಸಕರಾತ್ಮಕ ವಿಚಾರಗಳನ್ನು ಉದಾಹರಣೆಯಾಗಿ ನೀಡಿ. ಇದರಿಂದ ಮಕ್ಕಳು ಸಕರಾತ್ಮಕವಾಗಿ ಯೋಚನೆ ಮಾಡುತ್ತಾರೆ. ಇದರಿಂದ ಅವರು ಜೀವನದಲ್ಲಿ ಮುನ್ನಡೆಯುತ್ತಾರೆ.

ಬಾಲ್ಯದಲ್ಲಿಯೇ ಮಕ್ಕಳಿಗೆ ಸಾಮಾಜಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಿ. ಮಗುವಿಗೆ ಇತರ ಮಕ್ಕಳೊಂದಿಗೆ ಬೆರೆಯಲು ಬಿಡಿ. ಮತ್ತು ಜನರನ್ನು ನೋಡಿದಾಗ ಆಗುವ ಭಯವನ್ನು ನಿವಾರಿಸಿ.

ಹಾಗೇ ಮಕ್ಕಳಿಗೆ ಯಾವಾಗಲೂ ಸವಾಲಿನ ಕೆಲಸಗಳನ್ನು ನೀಡಿ. ಈ ಸವಾಲಿನ ಕೆಲಸಕ್ಕೆ ಸಹಾಯ ಮಾಡುವ ಬದಲು ಮಾರ್ಗದರ್ಶನಗಳನ್ನು ನೀಡಿ. ಇದರಿಂದ ಮಕ್ಕಳು ಜೀವನದಲ್ಲಿ ಮುಂದೆ ಬರುತ್ತಾರೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...