Kannada Duniya

ಶಾಸ್ತ್ರದ ಪ್ರಕಾರ, ಮದುವೆಯಾಗದ ಹುಡುಗಿಯರು ಈ ಕೆಲಸಗಳನ್ನು ಮಾಡಬಾರದಂತೆ

ಹಿಂದೂ ಧರ್ಮದಲ್ಲಿ ಶಾಸ್ತ್ರ ಸಂಪ್ರದಾಯಗಳಿಗೆ ಹೆಚ್ಚಿನ ಮಹತ್ವವಿದೆ. ಹಾಗಾಗಿ ನಮ್ಮ ಹಿರಿಯರು ಶಾಸ್ತ್ರಗಳಿಗನುಸಾರವಾಗಿ ನಡೆದುಕೊಳ್ಳುತ್ತಾರಂತೆ. ಅದರಂತೆ ಮದುವೆಯಾದ ಹುಡುಗಿಯರು ಅಂದರೆ ಕನ್ಯೆಯರು ಕೆಲವು ಕೆಲಸಗಳನ್ನು ಮಾಡಬಾರದಂತೆ.

ಕನ್ಯೆಯರು ತುಳಸಿ ಗಿಡಕ್ಕೆ ನೀರನ್ನು ಹಾಕಬಾರದಂತೆ. ಇದರಿಂದ ಅವರ ಮದುವೆ ವಿಳಂಬವಾಗುತ್ತದೆ. ತುಳಸಿಯನ್ನು ವಿವಾಹಿತ ಮಹಿಳೆಯರು ಮಾತ್ರ ಪೂಜಿಸಬೇಕಂತೆ. ಹಾಗೇ ತುಳಸಿ ಪೂಜೆಯನ್ನು ಮುತ್ತೈದೆಯರು ಮಾಡಬೇಕು ಎಂಬ ಸಂಪ್ರದಾಯವಿದೆ.

ಹಾಗೇ ನಮ್ಮಲ್ಲಿ ಮದುವೆಯಾದ ಮಹಿಳೆಯರು ಕಾಲ್ಬೆರಳಿಗೆ ಕಾಲುಂಗುರ ಹಾಕುವ ಸಂಪ್ರದಾಯವಿದೆ. ಆದರೆ ಹುಡುಗಿಯರು ಕಾಲಿಗೆ ಕಾಲುಂಗುರವನ್ನು ಧರಿಸಬಾರದಂತೆ. ಇದು ಅವರ ಗರ್ಭಕೋಶದ ಮೇಲೆ ಪರಿಣಾಮ ಬೀರುತ್ತದೆಯಂತೆ.

ಹಾಗೇ ಮದುವೆಯಾಗದ ಹುಡುಗಿಯರು ಕೂದಲನ್ನು ಬಿಡಿಸಿಕೊಂಡು ಮಲಗಬಾರದಂತೆ. ಇದರಿಂದ ನಕರಾತ್ಮಕ ಶಕ್ತಿ ಅವರನ್ನು ಆಕರ್ಷಿಸುತ್ತದೆಯಂತೆ. ಅಲ್ಲದೇ ಮದುವೆಯಾಗದ ಹುಡುಗಿಯರು ಹಣೆಗೆ ಸಿಂಧೂರವನ್ನು ಹಚ್ಚಬಾರದಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...