Kannada Duniya

ಪೂಜೆಗೆ ಸಂಬಂಧಿಸಿದ ಈ ನಿಯಮಗಳನ್ನು ತಿಳಿದುಕೊಳ್ಳಿ

ಪ್ರತಿಯೊಬ್ಬರ ಮನೆಯಲ್ಲೂ ಪ್ರತಿದಿನ ದೇವರ ಪೂಜೆ ಮಾಡುತ್ತಾರೆ. ಇದರಿಂದ ತಮ್ಮ ಮನೆಗೆ ದೇವರ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ. ಆದರೆ ಪೂಜೆ ಮಾಡುವಾಗ ಸರಿಯಾದ ನಿಯಮವನ್ನು ಪಾಲಿಸಬೇಕು. ಇಲ್ಲವಾದರೆ ನಿಮಗೆ ಪೂಜಾ ಫಲ ಸಿಗುವುದಿಲ್ಲ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಪ್ರತಿಯೊಂದು ದಿಕ್ಕಿನಲ್ಲೂ ದೇವರು ನೆಲೆಸಿರುತ್ತಾರಂತೆ. ಹಾಗಾಗಿ ಆ ದೇವರಿಗೆ ಆ ದಿಕ್ಕಿನಲ್ಲೇ ನಿಂತು ಪೂಜೆ ಮಾಡಿದರೆ ಒಳ್ಳೆಯದಂತೆ. ಅದರಂತೆ ದಕ್ಷಿಣ ದಿಕ್ಕಿನಲ್ಲಿ ದುರ್ಗಾದೇವಿ, ಹನುಮಂತ, ಉತ್ತರ ದಿಕ್ಕಿನಲ್ಲಿ ಗಣೇಶ, ಲಕ್ಷ್ಮಿ, ಕುಬೇರ ಮತ್ತು ಈಶಾನ್ಯ ದಿಕ್ಕಿನಲ್ಲಿ ಶಿವ ಮತ್ತು ರಾಧಾ ಕೃಷ್ಣ, ಪೂರ್ವ ದಿಕ್ಕಿನಲ್ಲಿ ರಾಮ, ವಿಷ್ಣು, ಸೂರ್ಯದೇವ, ಪಶ್ಚಿಮ ದಿಕ್ಕಿನಲ್ಲಿ ಸರಸ್ವತಿ ನೆಲೆಸಿರುತ್ತಾರೆ ಎನ್ನಲಾಗುತ್ತದೆ.

ಹಾಗೇ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಪೂಜೆ ಮಾಡುವಾಗ ಶಂಖವನ್ನು ಊದಿ ನಂತರ ಪೂಜೆ ಮಾಡಬೇಕು. ಇದರಿಂದ ನಕರಾತ್ಮಕಶಕ್ತಿ ನಿವಾರಣೆಯಾಗುತ್ತದೆ. ಹಾಗೇ ಒಣಗಿದ ಹೂಗಳನ್ನು ತೆಗೆಯಬೇಕು. ಪೂಜಾ ಕೋಣೆಯ ಗೋಡೆಗೆ ತಿಳಿ ಬಣ್ಣವನ್ನು ಹಾಕಬೇಕು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...