Kannada Duniya

ನೀವು ಹುಟ್ಟಿದ ದಿನದ ಮೇಲೆ ನಿಮ್ಮ ಸ್ವಭಾವವನ್ನು ತಿಳಿಯಿರಿ

ಮನುಷ್ಯ ಹುಟ್ಟಿದ ದಿನ , ತಾರೀಕು, ಗಂಟೆ, ರಾಶಿ, ನಕ್ಷತ್ರ ಮುಂತಾದವುಗಳ ಮೂಲಕ ಅವರ ಸ್ವಭಾವ ಎಂತಹದು ಎಂದು ತಿಳಿಯಬಹುದು ಎಂಬುದು ಎಲ್ಲರಿಗೂ ತಿಳಿದಿದೆ. ಹಾಗಾಗಿ ಒಬ್ಬೊಬ್ಬರು ಒಂದೊಂದು ವಾರದಲ್ಲಿ ಜನಿಸಿರುತ್ತಾರೆ. ಹಾಗಾಗಿ ಅವರು ಹುಟ್ಟಿದ ವಾರದ ಹೆಸರಿನ ಮೂಲಕ ಅವರ ಸ್ವಭಾವ ತಿಳಿಯಿರಿ.

ಭಾನುವಾರ : ಈ ದಿನ ಜನಿಸಿದ ವ್ಯಕ್ತಿ ಸೂರ್ಯ ತೇಜಸ್ಸನ್ನು ಪಡೆದಿರುತ್ತಾನಂತೆ. ತುಂಬಾ ಬುದ್ಧಿವಂತ, ದಾನಶೂರ, ಉತ್ಸಾಹಿ ಮತ್ತು ಸದ್ಗುಣವಂತನಾಗಿರುತ್ತಾನಂತೆ. ಆದರೆ ತುಂಬಾ ಕೋಪಿಷ್ಟರಾಗಿರುತ್ತಾರಂತೆ.

ಸೋಮವಾರ : ಈ ದಿನ ಜನಿಸಿದವರು ಚಂದ್ರನ ಪ್ರಭಾವವನ್ನು ಪಡೆದಿರುತ್ತಾರೆ. ಇವರು ಬುದ್ಧಿವಂತ ಮತ್ತು ಶಾಂತ ಸ್ವಭಾವದವರಾಗಿದ್ದಾರೆ. ತಮ್ಮ ಸಿಹಿ ಮಾತಿನಿಂದ ಜನರನ್ನು ತಮ್ಮ ಕಡೆಗೆ ಒಲಿಸಿಕೊಳ್ಳುತ್ತಾರೆ.

ಮಂಗಳವಾರ : ಇವರು ಇತರರ ಕೆಲಸದಲ್ಲಿ ದೋಷಗಳನ್ನು ಹುಡುಕುತ್ತಾರೆ. ಇವರು ಧೈರ್ಯಶಾಲಿಗಳು. ಇವರು ಕುಟುಂಬಕ್ಕೆ ಕೀರ್ತಿ ತರುತ್ತಾರೆ.

ಬುಧವಾರ : ಇವರು ಸಿಹಿ ಮಾತು, ಅಧ್ಯಯನದಲ್ಲಿ ಆಸಕ್ತಿ, ಜ್ಞಾನವುಳ್ಳವರು ಮತ್ತು ಸಿರಿವಂತರಾಗಿರುತ್ತಾರೆ. ಇವರು ಯಾರನ್ನೂ ಸುಲಭಾಗಿ ನಂಬುವುದಿಲ್ಲ. ಆದರೆ ಒಬ್ಬರನ್ನು ನಂಬಿದರೆ ಜೀವನ ಪರ್ಯಂತ ಅವರನ್ನು ಅನುಸರಿಸುತ್ತಾರೆ.

ಗುರುವಾರ : ಈ ದಿನ ಜನಿಸಿದ ವ್ಯಕ್ತಿ ಉತ್ತಮ ಜ್ಞಾನವುಳ್ಳವರು, ಶ್ರೀಮಂತರು, ಅತ್ಯತ್ತಮ ಸಲಹೆಗಾರರಾಗಿದ್ದಾರೆ. ಹಾಗಾಗಿ ಇವರು ಜನರಿಂದ ಗೌರವ ಮತ್ತು ಖ್ಯಾತಿಯನ್ನು ಪಡೆಯುವ ಬಯಕೆ ಹೊಂದಿದ್ದಾರೆ.

ಶುಕ್ರವಾರ : ಇವರು ತಮಾಷೆಯ ಸ್ವಭಾವದವರಾಗಿದ್ದಾರೆ. ಇವರು ಉತ್ತಮ ಬುದ್ಧಿಶಕ್ತಿಯನ್ನು ಹೊಂದಿದ್ದಾರೆ. ದೇವರನ್ನು ಹೆಚ್ಚು ನಂಬುತ್ತಾರೆ.

ಶನಿವಾರ : ಇವರು ಧೈರ್ಯಶಾಲಿಗಳು ಮತ್ತು ಕಠಿಣ ಪರಿಶ್ರಮವನ್ನು ಹಾಕುತ್ತಾರೆ. ಇವರು ಜೀವನದಲ್ಲಿ ಎಂತಹ ಸಮಸ್ಯೆ ಬಂದರೂ ಅದನ್ನು ಎದುರಿಸುವ ಸಾಮರ್ಥ್ಯವುಳ್ಳವರಾಗಿದ್ದಾರೆ. ಇವರು ಬೇರೆಯವರಿಗೆ ಸೇವೆ ಮಾಡುವಂತಹ ಉತ್ತಮ ಮನೋಭಾವವನ್ನು ಹೊಂದಿದ್ದಾರೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...