Kannada Duniya

ಹರಿಯಾಲಿ ಅಮವಾಸ್ಯೆಯಂದು ರಾಶಿಚಕ್ರಕ್ಕೆ ಅನುಗುಣವಾಗಿ ಗಿಡಗಳನ್ನು ನೆಟ್ಟು ಸಮಸ್ಯೆಯನ್ನು ನಿವಾರಿಸಿಕೊಳ್ಳಿ

ಶ್ರಾವಣ ಮಾಸದಲ್ಲಿ ಬರುವ ಅಮವಾಸ್ಯೆಗೆ ಹರಿಯಾಲಿ ಅಮಾವಾಸ್ಯೆ ಎಂದು ಕರೆಯುತ್ತಾರೆ. ಇದು ಆಗಸ್ಟ್ 8 ರಂದು ಬರಲಿದೆ.

ಈ ಅಮಾವಾಸ್ಯೆಯಂದು ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪಿತೃಗಳಿಗೆ ತರ್ಪಣ ಬಿಡುತ್ತಾರೆ, ದಾನ ಧರ್ಮ ಮಾಡುತ್ತಾರೆ. ಹಾಗೇ ಪಿತೃದೋಷ ನಿವಾರಣೆಯಾಗಲು ಈ ಅಮಾವಾಸ್ಯೆಯಂದು ಗಿಡ ನೆಡುವ ನಂಬಿಕೆ ಇದೆ. ಹಾಗಾಗಿ ಹರಿಯಾಲಿ ಅಮವಾಸ್ಯೆಯಂದು ರಾಶಿಚಕ್ರಕ್ಕೆ ಅನುಗುಣವಾಗಿ ಗಿಡಗಳನ್ನು ನೆಟ್ಟು ತೊಂದರೆಯನ್ನು ನಿವಾರಿಸಿಕೊಳ್ಳಿ.

 

ಮೇಷ ರಾಶಿ : ಈ ಅಮಾವಾಸ್ಯೆಯನ್ನು ನೆಲ್ಲಿಕಾಯಿ ಗಿಡವನ್ನು ನೆಡುವುದು ಉತ್ತಮ.

 

ವೃಷಭ ರಾಶಿ : ಇವರು ಯಾವುದಾದರೊಂದು ಹಣ್ಣಿನ ಗಿಡವನ್ನು ನೆಟ್ಟರೆ ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆ.

 

ಮಿಥುನ ರಾಶಿ : ಇವರು ಈ ಅಮಾವಾಸ್ಯೆಯಂದು ಚಂಪಾ ಹೂಗಳ ಗಿಡವನ್ನು ನೆಡಬೇಕು.

 

ಕಟಕ ರಾಶಿ : ಇವರು ಅರಳೀಮರದ ಗಿಡ ನೆಟ್ಟರೆ ಉತ್ತಮ.

 

ಸಿಂಹರಾಶಿ : ಇವರು ಪಿತೃದೋಷ ನಿವಾರಣೆಗೆ ಆಲದ ಮರದ ಗಿಡವನ್ನು ನೆಡಬೇಕು.

 

ಕನ್ಯಾರಾಶಿ : ಇವರು ಹರಿಯಾಲಿ ಅಮವಾಸ್ಯೆಯಂದು ಬಿಲ್ವಪತ್ರೆ ಗಿಡವನ್ನು ನೆಡಬೇಕು. ಇದರಿಂದ ಶಿವನ ಆಶೀರ್ವಾದ ಸಿಗುತ್ತದೆ.

 

ತುಲಾ ರಾಶಿ : ಇವರು ಅರ್ಜುನ (ಮತ್ತಿ) ಮರದ ಗಿಡವನ್ನು ನೆಡಬೇಕು.

 

ವೃಶ್ಚಿಕ ರಾಶಿ : ಇವರು ಅಮಾವಾಸ್ಯೆಯಂದು ಬೇವಿನ ಗಿಡವನ್ನು ನೆಡಬೇಕು.

 

ಧನುರಾಶಿ : ಧನು ರಾಶಿಯವರ ಕಾನರ್ (kaner) ಗಿಡವನ್ನು ನೆಡಬೇಕು.

 

ಮಕರ ರಾಶಿ : ಇವರು ಶಮಿ ಮರವನ್ನು ನೆಡಬೇಕು.

 

ಕುಂಭ ರಾಶಿ: ಇವರು ಅಮಾವಾಸ್ಯೆಯಂದು ಮಾವಿನ ಮರವನ್ನು ನೆಡಬೇಕು.

ಈ ರಾಶಿಯಲ್ಲಿ ಜನಿಸಿದವರು ಆಗಸ್ಟ್ ನಲ್ಲಿ ಹಠಾತ್ ಧನಲಾಭ ಪಡೆಯುತ್ತಾರಂತೆ

ಮೀನ ರಾಶಿ : ಇವರು ಪ್ಲಮ್ ಹಣ್ಣಿನ ಮರವನ್ನು ನೆಡಬೇಕು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...