Kannada Duniya

ಮನೆಯ ಸಂತೋಷ ಮತ್ತು ಸಮೃದ್ಧಿಗಾಗಿ ಗಣಪತಿಯ ಪೂಜೆಯ ವೇಳೆ ಈ ನಿಯಮ ಪಾಲಿಸಿ…!

ಗಣಪತಿಯನ್ನು ವಿಘ್ನ ನಿವಾರಕನೆಂದು ಕರೆಯುತ್ತಾರೆ. ಈತನನ್ನು ಪೂಜಿಸುವುದರಿಂದ ಮನೆಯಲ್ಲಿ ಶಾಂತಿ, ನೆಮ್ಮದಿ , ಸಂಪತ್ತು ನೆಲೆಸಿರುತ್ತದೆ. ಬುಧವಾರ ಗಣಪತಿಯ ಪೂಜೆಗೆ ಮೀಸಲಿಡಲಾಗಿದೆ. ಹಾಗಾಗಿ ಬುಧವಾರದಂದು ಗಣಪತಿಯ ಪೂಜೆ ಮಾಡುವಾಗ ಈ ನಿಯಮ ಪಾಲಿಸಿ.

-ಗಣಪತಿಯ ಪೂಜೆ ಮಾಡುವ ಸ್ಥಳ ಸ್ವಚ್ಛವಾಗಿರಬೇಕು. ಬೆಳಿಗ್ಗೆ ಸ್ನಾನಾಧಿಗಳನ್ನು ಮುಗಿಸಿ ಹೊಸ ಬಟ್ಟೆ ಧರಿಸಿ. ಪೂಜೆಯ ಸ್ಥಳವನ್ನು ಸ್ವಚ್ಛಗೊಳಿಸಿ. ಚೌಕಿಯಲ್ಲಿ ಕೆಂಪು ಬಟ್ಟೆಯನ್ನು ಹಾಕುವ ಮೂಲಕ ಗಣಪತಿಯನ್ನು ಪೂಜಿಸಿ.

-ಬುಧವಾರದಂದು ಗಣಪತಿಗೆ ಪೂಜೆಯ ವೇಳೆ ಗರಿಕೆ ಹುಲ್ಲನ್ನು ಅರ್ಪಿಸುವುದನ್ನು ಮರೆಯಬೇಡಿ. ಈ ದಿನ ಗಣಪತಿಗೆ 21 ಗರಿಕೆ ಹುಲ್ಲನ್ನು ಅರ್ಪಿಸಿ. ಗಣೇಶ ಮಂತ್ರವನ್ನು ಜಪಿಸಿ. ಇದರಿಂದ ಪೂಜೆಯ ವಿಶೇಷ ಫಲ ದೊರೆಯುತ್ತದೆ.

-ಗಣಪತಿಗೆ ಬುಧವಾರದಂದು ಪೂಜೆ ಮಾಡುವಾಗ ಮೋದಕ ಮತ್ತು ಬೆಲ್ಲವನ್ನು ಗಣಪತಿಗೆ ಅರ್ಪಿಸಿ ಪೂಜೆಯ ಬಳಿಕ ಅದನ್ನು ಪ್ರಸಾದದ ರೂಪದಲ್ಲಿ ಕುಟುಂಬ ಸದಸ್ಯರಿಗೆ ನೀಡಿ.

-ಮನೆಯಲ್ಲಿನ ತೊಂದರೆಗಳನ್ನು ತೊಡೆದು ಹಾಕಲು ಮತ್ತು ವೈವಾಹಿಕ ಜೀವನದಲ್ಲಿ ತೊಂದರೆಗಳನ್ನು ನಿವಾರಿಸಲು ಬುಧವಾರ ಗಣಪತಿಗೆ ಕೆಂಪು ಸಿಂಧೂರವನ್ನು ಅರ್ಪಿಸಿ. ಇದು ಗಣಪತಿಗೆ ಪ್ರಿಯವಾಗಿದ್ದು, ಇದರಿಂದ ನಿಮಗೆ ವಿಶೇಷ ಫಲ ದೊರೆಯುತ್ತದೆ.

ಬುಧವಾರ ಈ ಕ್ರಮಗಳನ್ನು ಪಾಲಿಸಿದರೆ ಅರ್ಧಕ್ಕೆ ನಿಂತ ನಿಮ್ಮ ಕಾರ್ಯಗಳು ಪೂರ್ತಿಯಾಗುತ್ತದೆಯಂತೆ

-ಬುಧವಾರದಂದು ಪೂಜೆಯ ವೇಳೆ ಹಸಿರು ಬಟ್ಟೆಯನ್ನು ಧರಿಸಿ. ಮತ್ತು ಹಸುವಿಗೆ ಹಸಿರು ಹುಲ್ಲನ್ನು ತಿನ್ನಿಸಿ. ಇದರಿಂದ ಬುಧನ ಅನುಗ್ರಹ ದೊರೆತು ಹಣದ ಬಿಕ್ಕಟ್ಟು ದೂರವಾಗುತ್ತದೆ.

 

Rules to follow during Lord Ganesh pooja at home


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...