Kannada Duniya

ಮಾರ್ಚ್ 15ರಂದು ಮೀನ ರಾಶಿಯಲ್ಲಿ 3 ಗ್ರಹಗಳ ಸಂಯೋಗ; ಈ ರಾಶಿಯವರಿಗೆ ಒಳ್ಳೆಯದಾಗಿದೆಯಂತೆ

ಮಾರ್ಚ್ 15ರಂದು ಗ್ರಹಗಳ ರಾಜ ಸೂರ್ಯನು ಕುಂಭ ರಾಶಿಯನ್ನು ಬಿಟ್ಟು ಮೀನ ರಾಶಿಗೆ ಸಾಗಲಿದ್ದಾನೆ. ಈಗಾಗಲೇ ಮೀನರಾಶಿಯಲ್ಲಿ ಬುಧ ಮತ್ತು ಶುಕ್ರರು ಇದ್ದಾರೆ. ಹಾಗಾಗಿ ಈಗ ಸೂರ್ಯನ ಆಗಮನದಿಂದ ಮೂರು ಗ್ರಹಗಳ ಸಂಯೋಗವಾಗಲಿದೆ. ಇದರಿಂದ ಈ ರಾಶಿಯವರಿಗೆ ಒಳ್ಳೆಯದಾಗಲಿದೆಯಂತೆ.

ವೃಷಭ : ನೀವು ಕೆಲಸದಲ್ಲಿ ಹೆಚ್ಚು ಪ್ರತಿಫಲವನ್ನು ಪಡೆಯುತ್ತೀರಿ. ನಿಮ್ಮ ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ ಬರಲಿದೆ. ನಿಮ್ಮ ವೈವಾಹಿಕ ಜೀವನವು ಸುಖಕರವಾಗಿರುತ್ತದೆ.

ಮಿಥುನ : ನೀವು ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ.

ಕನ್ಯಾ : ನೀವು ವ್ಯವಹಾರದಲ್ಲಿ ಯಶಸ್ಸು ಕಾಣುತ್ತೀರಿ. ವಿದ್ಯಾರ್ಥಿಗಳಿಗೆ ಉತ್ತಮ ಫಲ ದೊರೆಯಲಿದೆ. ವೈವಾಹಿಕ ಜೀವನ ಸುಖಕರವಾಗಿರುತ್ತದೆ. ನಿಮಗೆ ಹೊಸ ಹೊಸ ಅವಕಾಶಗಳು ಕೂಡಿಬರಲಿದೆ.

ವೃಶ್ಚಿಕ : ನೀವು ಭೂಮಿ ಮತ್ತು ವಾಹನ ಖರೀದಿ ಮಾಡಬಹುದು. ಹಣದ ಒಳಹರಿವು ಹೆಚ್ಚಾಗುತ್ತದೆ. ನೀವು ಉತ್ತಮ ಆದಾಯವನ್ನು ಪಡೆಯುತ್ತೀರಿ.

ತುಲಾ : ನೀವು ಶತ್ರುಗಳಿಂದ ವಿಜಯ ಸಾಧಿಸುತ್ತೀರಿ. ಕಾನೂನು ವಿಚಾರದಿಂದ ಮುಕ್ತಿ ಪಡೆಯುತ್ತೀರಿ. ನಿಮ್ಮ ಶಕ್ತಿ ಮತ್ತು ಆತ್ಮವಿಶ್ವಾಸ ಹೆಚ್ಚಾಗಲಿದೆ. ನೀವು ಸುಖಮಯ ಜೀವನ ನಡೆಸುತ್ತೀರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...