Kannada Duniya

Chanakya Niti-Money: ಚಾಣಕ್ಯ ನೀತಿಯಲ್ಲಿ ತಿಳಿಸಿದ ಹಣಕ್ಕೆ ಸಂಬಂಧಿಸಿದ ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ…!

ಆಚಾರ್ಯ ಚಾಣಕ್ಯ ಅವರು ಪ್ರತಿಯೊಂದು ವಿಚಾರದಲ್ಲೂ ಆಳವಾದ ಜ್ಞಾನವನ್ನು ಹೊಂದಿದ್ದಾರೆ. ಅವರು ತಮ್ಮ ಚಾಣಕ್ಯ ನೀತಿಯಲ್ಲಿ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಅದರಲ್ಲಿ ಅವರು ಹಣಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ತಿಳಿಸಿದ್ದಾರೆ. ಅದನ್ನು ನೀವು ನೆನಪಿನಲ್ಲಿಟ್ಟುಕೊಂಡರೆ ಜೀವನದಲ್ಲಿ ಏಳಿಗೆ ಕಾಣಬಹುದು.

-ಜನರು ಯೋಚಿಸದೆ ಹಣವನ್ನು ಖರ್ಚು ಮಾಡಬಾರದು ಎಂದು ಚಾಣಕ್ಯ ಹೇಳುತ್ತಾರೆ. ಅವರು ತಮ್ಮ ಮುಂದಿನ ದಿನಗಳಿಗಾಗಿ ಹಣವನ್ನು ಉಳಿತಾಯ ಮಾಡಬೇಕು.

-ಅವರ ಪ್ರಕಾರ ಹಣ ಹೊಂದಿರುವ ಜನರು ಸಮಾಜದಲ್ಲಿ ಗೌರವವನ್ನು ಪಡೆಯುತ್ತಾರೆ. ಮತ್ತು ಶ್ರೀಮಂತ ಜನರಿಗೆ ತೊಂದರೆಗಳನ್ನು ಎದುರಿಸುವ ಸಾಮರ್ಥ್ಯವಿದೆ.

ಈ ವಿಚಾರಗಳನ್ನು ಬೇರೆಯವರೊಂದಿಗೆ ಹಂಚಿಕೊಂಡರೆ ನಷ್ಟಕ್ಕೆ ಒಳಗಾಗುತ್ತೀರಿ

-ಜನರು ಸಮೃದ್ಧಿ ನೆಲೆಸಿರುವ ಸ್ಥಳದಲ್ಲಿ ಮಾತ್ರ ವಾಸಿಸಬೇಕು. ವಿದ್ಯಾವಂತರು, ಬ್ರಾಹ್ಮಣರು, ನದಿಗಳು, ಆರೋಗ್ಯ ತಜ್ಞರು ಮುಂತಾದವರು ಇರದ ಸ್ಥಳಗಳಲ್ಲಿ ಎಂದಿಗೂ ವಾಸಿಸಬಾರದು. ಮತ್ತು ಜನರು ಉದ್ಯೋಗ, ಗೌರವ ಮತ್ತು ಶಿಕ್ಷಣ ಪಡೆದಾಗ ಸಂಪತ್ತನ್ನು ಪಡೆಯುತ್ತಾರೆ.

-ಜನರು ಹಣದ ಮೂಲಕ ಸಂಬಂಧವನ್ನು ಗುರುತಿಸಬಾರದು. ಹಣ ಮತ್ತು ಆಸ್ತಿಯನ್ನು ಕಳೆದುಕೊಂಡಾಗ ಮಾತ್ರ ಸಂಬಂಧಗಳ ನಿಜವಾದ ರೂಪ ತಿಳಿಯುತ್ತದೆ ಎಂದು ಅವರು ತಿಳಿಸಿದ್ದಾರೆ.

-ಮನಸ್ಸಿನಲ್ಲಿ ದಯೆ, ಕರುಣೆ ಇದ್ದವರಿಗೆ ಮಹಾಲಕ್ಷ್ಮಿ ಒಲಿಯುತ್ತಾಳೆ. ಅವರ ಮೇಲೆ ಸಂಪತ್ತಿನ ಸುರಿಮಳೆ ಸುರಿಯುತ್ತದೆ ಎಂದು ಅವರು ಹೇಳಿದ್ದಾರೆ.

-ಕಷ್ಟಪಟ್ಟು ದುಡಿಯುವ ಜನರಿಗೆ ಹಣದ ಕೊರತೆ ಕಾಡಲ್ಲ. ಅಂತಹ ಜನರು ಕಠಿಣ ಪರಿಶ್ರಮದಿಂದ ತಮ್ಮ ಅದೃಷ್ಟವನ್ನು ಬದಲಾಯಿಸಿಕೊಳ್ಳುತ್ತಾರೆ.

Learn what Chanakya has to say about money and success


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...