Kannada Duniya

ಅಂಗೈಯಲ್ಲಿ ರೇಖೆಗಳು ಹೀಗಿದ್ದರೆ ವ್ಯಕ್ತಿ ಒಂದಕ್ಕಿಂತ ಹೆಚ್ಚು ಮದುವೆಯಾಗುತ್ತಾನಂತೆ

ಪ್ರತಿಯೊಬ್ಬರು ಜೀವನದಲ್ಲಿ ಭವಿಷ್ಯವನ್ನು ತಿಳಿಯಲು ಬಯಸುತ್ತಾರೆ. ಅದಕ್ಕೆ ಹಸ್ತರೇಖಾ ಶಾಸ್ತ್ರವು ತುಂಬಾ ಸಹಾಯಕವಾಗಿದೆ. ಕೈಯ ರೇಖೆಗಳು ಮತ್ತು ಅವು ರೂಪುಗೊಂಡ ಆಕಾರದ ಮೇಲೆ , ಮಚ್ಚೆಗಳು, ಇತ್ಯಾದಿಗಳ ಮೂಲಕ ವ್ಯಕ್ತಿಯ ಭವಿಷ್ಯ ಏನೆಂದು ತಿಳಿಯುತ್ತದೆ. ಇದರಿಂದ ವ್ಯಕ್ತಿಯ ವೃತ್ತಿ, ಸಂಪತ್ತು, ಮದುವೆ, ಮಕ್ಕಳು, ಆರೋಗ್ಯ ಮುಂತಾದ ವಿಷಯಗಳನ್ನು ತಿಳಿಯಬಹುದು. ಹಾಗಾಗಿ ವ್ಯಕ್ತಿಯ ಮದುವೆ ಬಗ್ಗೆ ಹೀಗೆ ತಿಳಿಯಿರಿ.

-ವ್ಯಕ್ತಿಯ ಅಂಗೈಯ ಹೊರಗಿನಿಂದ ಕೈಯ ಚಿಕ್ಕ ಬೆರಳಿನ ಕೆಳಗೆ ಒಳಭಾಗಕ್ಕೆ ಬರುವ ರೇಖೆಯು ಮದುವೆಯ ಬಗ್ಗೆ ತಿಳಿಸುತ್ತದೆ. ಇಲ್ಲಿ ಒಂದಕ್ಕಿಂತ ಹೆಚ್ಚು ಸಾಲುಗಳಿದ್ದರೆ ಆ ವ್ಯಕ್ತಿ ಒಂದಕ್ಕಿಂತ ಹೆಚ್ಚು ಮದುವೆಯಾಗುತ್ತಾನೆ.

-ಮದುವೆಯ ರೇಖೆಯ ಸುತ್ತಲಿನ ಸಾಲುಗಳು ಪ್ರೀತಿಯ ಸಂಬಂಧದ ಬಗ್ಗೆ ಹೇಳುತ್ತದೆ. ಅಲ್ಲಿ ಹೆಚ್ಚು ಸಾಲುಗಳಿದ್ದರೆ ವ್ಯಕ್ತಿಯು ಹೆಚ್ಚು ಪ್ರೀತಿಯ ಸಂಬಂಧಗಳನ್ನು ಹೊಂದಿರುತ್ತಾನೆ.
ಮದುವೆ ರೇಖೆಯು ಹೃದಯದ ರೇಖೆಗೆ ಅತ್ಯಂತ ಸಮೀಪದಲ್ಲಿದ್ದರೆ ವ್ಯಕ್ತಿಯು ಶೀಘ್ರದಲ್ಲಿಯೇ ಮದುವೆಯಾಗುತ್ತಾನೆ. ಹೃದಯದ ರೇಖೆಯಿಂದ ದೂರವಿದ್ದರೆ ಮದುವೆ ವಿಳಂಬವಾಗುತ್ತದೆ.

-ವಿವಾಹದ ರೇಖೆ ಆರಂಭವಾಗುವ ಸ್ಥಳದಿಂದ ಇನ್ನೊಂದು ಸಾಲು ಹೊರಹೊಮ್ಮಿದರೆ ಆ ವ್ಯಕ್ತಿಯ ಮದುವೆ ಮುರಿದುಬೀಳುತ್ತದೆ.

ಈ ಒಂದು ರಾಶಿಯಲ್ಲಿ ಜನಿಸಿದ ಹುಡುಗಿಯರು ಧೈರ್ಯಶಾಲಿ ಮತ್ತು ನಿರ್ಭಯರು…!

-ಮದುವೆ ರೇಖೆಯು ನೇರವಾಗಿ ಹೋಗುವ ಬದಲು ಕೆಳಗೆ ಬಾಗಿದರೆ ಅಂತವರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿರುತ್ತದೆ.

 

Lines on palm which tell about weddings


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...