Kannada Duniya

ಈ ರಾಶಿಯಲ್ಲಿ ಜನಿಸಿದ ಮಕ್ಕಳು ಓದುವುದರಲ್ಲಿ ಬುದ್ಧಿವಂತರಾಗಿರುತ್ತಾರಂತೆ

ಮನುಷ್ಯ ಹುಟ್ಟಿದ ರಾಶಿಗನುಗುಣವಾಗಿ ಅವರ ಸ್ವಭಾವ ಮತ್ತು ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದು. ಅದರಂತೆ ಹುಟ್ಟಿದ ರಾಶಿ ಚಕ್ರದ ಮೇರೆಗೆ ನಿಮ್ಮ ಮಕ್ಕಳು ಬುದ್ಧಿವಂತರೋ? ದಡ್ಡರೋ? ಎಂಬುದನ್ನು ತಿಳಿಯಬಹುದಂತೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ರಾಶಿಯಲ್ಲಿ ಜನಿಸಿದ ಮಕ್ಕಳು ಬುದ್ಧಿವಂತರಾಗಿರುತ್ತಾರಂತೆ.

ಮೇಷ ರಾಶಿ : ಈ ರಾಶಿಯಲ್ಲಿ ಜನಿಸಿದ ಮಕ್ಕಳು ಬಹಳ ಬುದ್ಧಿವಂತರಾಗಿರುತ್ತಾರಂತೆ. ಇವರಲ್ಲಿ ಕಲಿಯುವ ಆಸಕ್ತಿ ಹೆಚ್ಚಾಗಿರುತ್ತದೆಯಂತೆ. ಹಾಗೇ ಇವರಿಗೇ ಧೈರ್ಯವೂ ಹೆಚ್ಚಾಗಿರುತ್ತದೆ, ಇವರು ಸವಾಲನ್ನು ನಿರ್ಭೀತಿಯಿಂದ ಸ್ವೀಕರಿಸುತ್ತಾರಂತೆ. ಇವರು ಬಾಲ್ಯದಿಂದಲೂ ಹೆಮ್ಮೆ ಪಡುವಂತಹ ಕೆಲಸ ಮಾಡುತ್ತಾರಂತೆ.

ಮಿಥುನ ರಾಶಿ : ಈ ಮಕ್ಕಳು ಓದುವುದರಲ್ಲಿ ಬಹಳ ಜಾಣರಾಗಿರುತ್ತಾರೆ. ಇವರು ಎಲ್ಲವನ್ನೂ ಒಂದೇ ಬಾರಿ ಅರ್ಥ ಮಾಡಿಕೊಳ್ಳುತ್ತಾರೆ. ಇವರು ತಮ್ಮ ಪ್ರತಿಭೆಯ ಮೂಲಕ ಎಲ್ಲರ ಹೃದಯವನ್ನು ಗೆಲ್ಲುತ್ತಾರೆ.

ಮಕರ ರಾಶಿ : ಇವರಲ್ಲಿ ಜ್ಞಾಪಕ ಶಕ್ತಿ ಉತ್ತಮವಾಗಿರುತ್ತದೆ. ಇವರು ಯಾರನ್ನಾದರೂ ಸುಲಭವಾಗಿ ನೆನಪಿಸಿಕೊಳ್ಳುತ್ತಾರೆ. ಇವರು ಬಾಲ್ಯದಲ್ಲಿಯೇ ತೀಕ್ಷ್ಣ ಮನಸ್ಸನ್ನು ಹೊಂದಿರುತ್ತಾರೆ. ಇವರು ಹೆತ್ತವರಿಗೆ ಕೀರ್ತಿಯನ್ನು ತಂದುಕೊಡುತ್ತಾರೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...