Kannada Duniya

ಚತುರ್ಥಿಯ ದಿನ ಗಣೇಶನ ಮೂರ್ತಿಯನ್ನು ಈ ಶುಭ ಸಮಯದಲ್ಲಿ ಸ್ಥಾಪಿಸಿ ಪೂಜಿಸಿದರೆ ಶುಭವಾಗಲಿದೆಯಂತೆ

ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ದಿನ ಎಲ್ಲರೂ ಗಣೇಶ ಚತುರ್ಥಿಯನ್ನು ಆಚರಿಸಿ ಗಣೇಶನಿಗೆ ವಿಜೃಂಭಣೆಯಿಂದ ಪೂಜೆ, ನೈವೇದ್ಯ ಅರ್ಪಿಸಿ , ಹಬ್ಬವನ್ನು ಮಾಡುತ್ತಾರೆ. ಈ ಬಾರಿ ಗಣೇಶ ಚೌತಿ ಸೆಪ್ಟೆಂಬರ್10 ರಂದು ಬಂದಿದೆ. ಈ ದಿನ ಗಣೇಶನನ್ನು ಯಾವ ಶುಭ ಮುಹೂರ್ತದಲ್ಲಿ ಸ್ಥಾಪಿಸಿ, ಹೇಗೆ ಪೂಜೆ ಮಾಡಬೇಕು ಎಂಬುದನ್ನು ತಿಳಿಯಿರಿ.

 

ಸೆಪ್ಟೆಂಬರ್ 10 ರಂದು ಚತುರ್ಥಿ ದಿನ ಗಣೇಶ ಭೂಮಿಗೆ ಬರಲಿದ್ದಾನೆ. ಅಂದು ಗಣೇಶನನ್ನು ಮೂರ್ತಿಯ ರೂಪದಲ್ಲಿ ಕೂರಿಸಿ ಬಳಿಕ ಸೆಪ್ಟೆಂಬರ್ 19 ರಂದು ಅನಂತ ಚತುರ್ದಶಿಯಂದು ಅವನಿಗೆ ಬೀಳ್ಕೊಡುಗೆ ನೀಡಲಾಗುತ್ತದೆ. ಈ 10 ದಿನಗಳ ಕಾಲ ಗಣೇಶನನ್ನು ಪೂಜಿಸಲಾಗುತ್ತದೆ. ಆಗ ಈ ನಿಯಮಗಳನ್ನು ಪಾಲಿಸಿ.

 

ಗಣೇಶನ ಮೂರ್ತಿಯನ್ನಿಡುವ ಸ್ಥಳವನ್ನು ಚೆನ್ನಾಗಿ ತೊಳೆದು, ರಂಗೋಲಿ ಹಾಕಿ ಅದರ ಮೇಲೆ ಪೀಠವಿಟ್ಟು ಕೆಂಪು ಬಟ್ಟೆಯನ್ನು ಹೊದಿಸಿ ಗಣೇಶನ ಮೂರ್ತಿಯನ್ನು ಕೂರಿಸಿ. ಗಣೇಶನ ಮೂರ್ತಿಯನ್ನು ಸ್ಥಾಪಿಸಲು ಶುಭ ಸಮಯ ಮಧ್ಯಾಹ್ನ 12:17 ರಿಂದ ರಾತ್ರಿ 10ರವರೆಗೆ ಇರುತ್ತದೆ.

 

ಬುಧವಾರ ಗಣೇಶನ ಪೂಜೆ ಈ ರೀತಿ ಮಾಡಬೇಕಂತೆ

 

ಹಾಗೇ ಗಣೇಶನನ್ನು ಪೂಜಿಸುವಾಗ “ಓಂ ಗಣಪತಯೇ ನಮಃ” ಮಂತ್ರವನ್ನು ಜಪಿಸಬೇಕು. ಅಲ್ಲದೇ ಗರಿಕೆ, ವೀಳ್ಯದೆಲೆ, ಸಿಂಧೂರ ವನ್ನು ಅರ್ಪಿಸಬೇಕು. ಹಾಗೇ ಗಣೇಶನಿಗೆ ನೆಚ್ಚಿನ ಮೋದಕವನ್ನು ,ಲಡ್ಡುಗಳನ್ನು ಅರ್ಪಿಸಿ.

 

Auspicious time for Ganesh Sthapan on Ganesh Chaturthi


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...