Kannada Duniya

ಹೋಳಿ ಹಬ್ಬದಂದು ಈ ವಸ್ತುಗಳನ್ನು ಮನೆಗೆ ತಂದರೆ ಲಕ್ಷ್ಮಿದೇವಿಯ ಆಶೀರ್ವಾದ ದೊರೆಯುತ್ತದೆಯಂತೆ

ಹೋಳಿ ಬಣ್ಣಗಳ ಹಬ್ಬ. ಇದು ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಫಾಲ್ಗುಣ ಮಾಸದ ಹುಣ್ಣಿಮೆಯಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಅದರಂತೆ ಈ ವರ್ಷ ಮಾರ್ಚ್ 25ರಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಹಾಗಾಗಿ ಹೋಳಿ ಹಬ್ಬದಂದು ಈ ವಸ್ತುಗಳನ್ನು ಮನೆಗೆ ತಂದರೆ ಲಕ್ಷ್ಮಿದೇವಿಯ ಆಶೀರ್ವಾದ ದೊರೆಯುತ್ತದೆಯಂತೆ.

ಬಿದಿರಿನ ಸಸ್ಯ : ಇದು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಈ ಸಸ್ಯವನ್ನು ಮನೆಗೆ ತನ್ನಿ. ಇದು ನಕರಾತ್ಮಕತೆಯನ್ನು ನಿವಾರಿಸಿ ಮನೆಯಲ್ಲಿ ಸಂತೋಷ ನೆಲೆಸುವಂತೆ ಮಾಡುತ್ತದೆ.

ಬೆಳ್ಳಿ ನಾಣ್ಯ : ಹೋಳಿ ಹಬ್ಬಕ್ಕೆ ಬೆಳ್ಳಿ ನಾಣ್ಯವನ್ನು ಖರೀದಿಸಿ ಮನೆಗೆ ತನ್ನಿ. ಇದನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಹಣವಿಡುವ ಸ್ಥಳದಲ್ಲಿ ಇಡಿ. ಇದರಿಂದ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಆಮೆ ಪ್ರತಿಮೆ : ಹಿಂದೂಧರ್ಮದಲ್ಲಿ ಆಮೆಯನ್ನು ವಿಷ್ಣುವಿನ ಸ್ವರೂಪವೆಂದು ಪೂಜಿಸಲಾಗುತ್ತದೆ. ಹಾಗಾಗಿ ಹೋಳಿ ಹಬ್ಬದಂದು ಲೋಹದ ಆಮೆಯ ಪ್ರತಿಮೆಯನ್ನು ಮನೆಗೆ ಪೂಜಾ ಕೋಣೆಯಲ್ಲಿಟ್ಟು ಪೂಜೆ ಮಾಡಿದರೆ ಲಕ್ಷ್ಮಿದೇವಿ ಆ ಮನೆಯಲ್ಲಿ ನೆಲೆಸುತ್ತಾಳಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...