Kannada Duniya

ಮನೆಯಲ್ಲಿ ಈ ಮೂರ್ತಿಯನ್ನು ಇಟ್ಟರೆ ಏನೆಲ್ಲ ಪ್ರಯೋಜನ ಇದೆ ಗೊತ್ತಾ…?

ಆಮೆಗೆ ಹಿಂದೂ ಧರ್ಮದಲ್ಲಿ ವಿಶೇಷವಾದ ಮಹತ್ವವಿದೆ. ಆಮೆಯನ್ನು ವಿಷ್ಣು ಅವತಾರವೆಂದು ಪೂಜಿಸುತ್ತಾರೆ. ಆದ್ದರಿಂದ ಇದನ್ನು ಮನೆಯಲ್ಲಿ ಇಡುವುದರಿಂದ ಆ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ. ಇದರಿಂದ ಮನೆಯಲ್ಲಿ ಸಂಪತ್ತು ತುಂಬಿರುತ್ತದೆಯಂತೆ. ಅಲದೇ ಆಮೆ ಮೂರ್ತಿಯನ್ನು ಮನೆಯಲ್ಲಿಡುವುದರಿಂದ ಏನೆಲ್ಲಾ ಪ್ರಯೋಜನವಿದೆ ಎಂಬುದನ್ನು ತಿಳಿಯೋಣ.

-ಆಮೆ ಮೂರ್ತಿಯಿಂದ ಮನೆಯಲ್ಲಿ ಸಕರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಮನೆಯ ಸದಸ್ಯರು ಒಗ್ಗಟ್ಟಿನಿಂದ ಇರುತ್ತಾರೆ. ಮನೆಯಲ್ಲಿ ಸುಖ, ಶಾಂತಿ ನೆಲೆಸಿರುತ್ತದೆ.

-ಹೊಸ ವ್ಯವಹಾರಗಳನ್ನು ಪ್ರಾರಂಭಿಸುವಾಗ ಬೆಳ್ಳಿ ಆಮೆಯನ್ನು ನಿಮ್ಮ ಕಚೇರಿ ಅಥವಾ ಅಂಗಡಿಯಲ್ಲಿ ಇಡಿ. ಇದರಿಂದ ಲಾಭ ಪಡೆಯಬಹುದು.

-ನಿಮ್ಮ ವೃತ್ತಿ ಜೀವನದಲ್ಲಿ ಪ್ರಗತಿ ಹೊಂದಲು ನೀವು ಕಚೇರಿಯ ಮೇಜಿನ ಮೇಲೆ ಕಪ್ಪು ಆಮೆಯ ವಿಗ್ರಹವನ್ನು ಉತ್ತರ ದಿಕ್ಕಿನಲ್ಲಿಡಿ.

-ಆಮೆಯನ್ನು ರಕ್ಷಕ ಎನ್ನುತ್ತಾರೆ. ಹಾಗಾಗಿ ಆಮೆಯ ಮೂರ್ತಿಯನ್ನು ಮನೆಯ ಪಶ್ಚಿಮ ಬಾಗಿಲಿನ ಬಳಿ ಇಡುವುದರಿಂದ ಮನೆಯ ಸುರಕ್ಷತೆ ಹೆಚ್ಚಾಗುತ್ತದೆ.

-ಮಕ್ಕಳು ಮನೆಯಲ್ಲಿ ಸಂತೋಷವಾಗಿ, ಆರೋಗ್ಯವಾಗಿರಲು ಮನೆಯಲ್ಲಿ ಆಮೆಯ ಬೆನ್ನಿನ ಮೇಲೆ ಮರಿ ಆಮೆ ಇರುವ ಮೂರ್ತಿಯನ್ನು ಇಡಿ.

-ಮನೆಯಲ್ಲಿ ಆರ್ಥಿಕ ಸಮಸ್ಯೆ ಇದ್ದರೆ ಆಮೆಯನ್ನು ಸ್ಪಟಿಕದ ಜೊತೆ ಇಟ್ಟರೆ ಸಮಸ್ಯೆ ದೂರವಾಗುತ್ತದೆ.

-ಆಮೆಯ ಮೂರ್ತಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವಾಗ ಆಮೆಯ ಮುಖವು ಪೂರ್ವ ದಿಕ್ಕಿನಲ್ಲಿರಲಿ. ಇಲ್ಲವಾದರೆ ನಕರಾತ್ಮಕ ಪರಿಣಾಮ ಬೀರುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...