Kannada Duniya

ಮಹಾಶಿವರಾತ್ರಿಯ ದಿನದಂದು ಈ ವಸ್ತುಗಳನ್ನು ಮನೆಗೆ ತಂದರೆ ಶಿವನ ಆಶೀರ್ವಾದ ದೊರೆಯುತ್ತದೆಯಂತೆ

ಹಿಂದೂಧರ್ಮದಲ್ಲಿ ಮಹಾಶಿವರಾತ್ರಿಗೆ ವಿಶೇಷ ಮಹತ್ವವಿದೆ. ಈ ಹಬ್ಬ ಪ್ರತಿವರ್ಷ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ. ಈ ವರ್ಷ ಮಹಾಶಿವರಾತ್ರಿ ಮಾರ್ಚ್ 8ರಂದು ಬಂದಿದೆ. ಈ ದಿನ ಕೆಲವು ವಸ್ತುಗಳನ್ನು ಮನೆಗೆ ತಂದರೆ ಶಿವನ ಆಶೀರ್ವಾದ ದೊರೆಯುತ್ತದೆಯಂತೆ.

ನಂದಿ ವಿಗ್ರಹ : ನಂದಿ ಶಿವನ ವಾಹನ. ಹಾಗಾಗಿ ಮನೆಗೆ ನಂದಿಯ ವಿಗ್ರಹವನ್ನು ತಂದು ಪೂಜೆ ಮಾಡಿದರೆ ಶಿವನ ರಕ್ಷೆ ದೊರೆಯುತ್ತದೆಯಂತೆ.

ಬಿಲ್ವಪತ್ರೆ : ಬಿಲ್ವಪತ್ರೆ ಶಿವನಿಗೆ ಪ್ರಿಯವಾದ ವಸ್ತು. ಶಿವನ ಪೂಜೆಗೆ ಬಿಲ್ವಪತ್ರೆ ಅರ್ಪಿಸಿದರೆ ಒಳ್ಳೆಯದು. ಈ ದಿನ ಬಿಲ್ವಪತ್ರೆಯನ್ನು ಮನೆಗೆ ತಂದರೆ ಒಳ್ಳೆಯದಂತೆ.

ಶಿವ ಪರಿವಾರದ ಫೋಟೊ : ಈ ದಿನ ಶಿವನ ಪರಿವಾರದ ಫೋಟೊವನ್ನು ಮನೆಗೆ ತಂದರೆ ಒಳ್ಳೆಯದಂತೆ. ಇದರಲ್ಲಿ ಶಿವ ಪಾರ್ವತಿಯ ಜೊತೆಗೆ ಗಣೇಶ ಮತ್ತು ಷಣ್ಮುಖರು ಇರುತ್ತಾರೆ. ಶಿವನ ಆಶೀರ್ವಾದದಿಂದ ನಿಮ್ಮ ಕುಟುಂಬದಲ್ಲಿ ಪ್ರೀತಿ ವಾತ್ಸಲ್ಯ ತುಂಬಿರುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...