Kannada Duniya

ಈ ರಾಶಿಯವರ ಬಳಿ ನಿಮ್ಮ ರಹಸ್ಯವನ್ನು ಹಂಚಿಕೊಳ್ಳಬಹುದು…!

ಜ್ಯೋತಿಷ್ಯದಲ್ಲಿ 12 ರಾಶಿಚಕ್ರಗಳಿವೆ. ಅದರಲ್ಲಿ ಜನಿಸಿದ ಒಬ್ಬೊಬ್ಬ ವ್ಯಕ್ತಿಯ ಸ್ವಭಾವವು ವಿಭಿನ್ನವಾಗಿರುತ್ತದೆ. ಅದರಲ್ಲಿ ಕೆಲವರನ್ನು ನಾವು ಕಣ್ಣುಮುಚ್ಚಿ ನಂಬಬಹುದು. ಮತ್ತು ನಮ್ಮ ರಹಸ್ಯಗಳನ್ನು ಅವರ ಬಳಿ ಹೇಳಬಹುದು. ಅವರು ಅದನ್ನು ಯಾರಿಗೂ ಹೇಳದೆ ರಹಸ್ಯವಾಗಿಡುತ್ತಾರೆ. ಹಾಗಾದ್ರೆ ಆ ರಾಶಿಯವರು ಯಾರೆಂಬುದನ್ನು ತಿಳಿದುಕೊಳ್ಳಿ.

ಮೇಷ ರಾಶಿ : ಇವರು ಪ್ರಾಮಾಣಿಕರು, ಸತ್ಯವಂತರು. ಇವರು ವಿಷಯಗಳನ್ನು ನೇರವಾಗಿ ಮಾತನಾಡುತ್ತಾರೆ. ಇವರು ಯಾವುದೇ ಆರಣಕ್ಕೂ ಮೋಸ ಮಾಡುವುದಿಲ್ಲ. ಹಾಗಾಗಿ ಇವರ ಬಳಿ ನಿಮ್ಮ ರಹಸ್ಯವನ್ನು ಹಂಚಿಕೊಳ್ಳಬಹುದು.

ಸಿಂಹ ರಾಶಿ : ಇವರು ನಿಷ್ಠಾವಂತರು ಮತ್ತು ಪ್ರಾಮಾಣಿಕರು. ಇವರ ಯಾರ ನಂಬಿಕೆಗಳನ್ನು ಮುರಿಯಲು ಇಷ್ಟಪಡುವುದಿಲ್ಲ. ಹಾಗೇ ಇವರು ಸುಳ್ಳು ಹೇಳಲು ಇಷ್ಟಪಡುವುದಿಲ್ಲ. ಮತ್ತು ರಹಸ್ಯವನ್ನು ಸಾಯುವವರೆಗೂ ಮುಚ್ಚಿಟ್ಟುಕೊಳ್ಳುತ್ತಾರೆ.

ಮಿಥುನ ರಾಶಿ : ಇವರು ಯಾವುದೇ ವಿಷಯವನ್ನು ತಮ್ಮೊಳಗೆ ಮುಚ್ಚಿಟ್ಟುಕೊಳ್ಳುತ್ತಾರೆ. ಮತ್ತು ನಿಮ್ಮೊಂದಿಗೆ ಕೊನೆಯವರೆಗೂ ಇರುತ್ತಾರೆ. ನಿಮ್ಮನ್ನು ಯಾವುದೇ ಪರಿಸ್ಥಿತಿಯಲ್ಲೂ ಬಿಟ್ಟು ಕೊಡುವುದಿಲ್ಲ. ಯಾರಿಗೂ ದ್ರೋಹ ಮಾಡುವುದಿಲ್ಲ.

ಪೊರಕೆ ತಂದ ಬಳಿಕ ಈ ಕೆಲಸ ಮಾಡಬೇಡಿ….!

ಮೀನ ರಾಶಿ : ಇವರು ತುಂಬಾ ನಂಬಿಕಸ್ಥರಾಗಿರುತ್ತಾರೆ. ನಿಮ್ಮ ವಿಷಯಗಳನ್ನು ಇತರರರೊಂದಿಗೆ ಹಂಚಿಕೊಳ್ಳುವುದಿಲ್ಲ. ಯಾವುದೇ ವಿಚಾರಗಳನ್ನು ರಹಸ್ಯವಾಗಿಡುತ್ತಾರೆ. ಮತ್ತು ತಮ್ಮ ಯೋಜನೆಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...