Kannada Duniya

ಹೃದಯ ಡಿಟಾಕ್ಸ್ ಮಾಡಲು ಈ ಸಲಹೆ ಪಾಲಿಸಿ…!

ಹೃದಯ ನಮ್ಮ ದೇಹದ ಪ್ರಮುಖ ಅಂಗ. ಇದು ದೇಹಕ್ಕೆ ರಕ್ತವನ್ನು ಪೂರೈಕೆ ಮಾಡುತ್ತದೆ. ಇದರಿಂದ ದೇಹದ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಹಾಯವಾಗುತ್ತದೆ. ಹಾಗಾಗಿ ದೇಹವನ್ನು ಡಿಟಾಕ್ಸ್ ಮಾಡುತ್ತಿರಬೇಕು. ಇದರಿಂದ ಯಾವುದೇ ಸಮಸ್ಯೆ ಕಾಡುವುದಿಲ್ಲ.

ಹೃದಯಕ್ಕೆ ಆಗಾಗ ಮಸಾಜ್ ನೀಡಬೇಕು. ಎಣ್ಣೆಯನ್ನು ಬಿಸಿ ಮಾಡಿ ಉಗುರು ಬೆಚ್ಚಗಿರುವಾಗ ಹೃದಯದ ಭಾಗಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಇದರಿಂದ ರಕ್ತ ಸರಿಯಾಗಿ ಪಂಪ್ ಆಗುತ್ತದೆ. ಇದರಿಂದ ಹೃದಯದಲ್ಲಿರುವ ಕಲ್ಮಶಗಳು ಹೊರಗೆ ಹೋಗುತ್ತದೆ.

ಹಾಗೇ ನಿಯಮಿತವಾಗಿ ಧ್ಯಾನ, ಪ್ರಾಣಾಯಾಮ, ಉಸಿರಾಟದ ವ್ಯಾಯಾಮಗಳನ್ನು ಮಾಡಿ. ಇದು ಹೃದಯದ ಕಾರ್ಯವನ್ನು ಸುಧಾರಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ. ಹೃದಯ ಆರೋಗ್ಯವಾಗಿರುತ್ತದೆ.

ಅಲ್ಲದೇ ನೀರನ್ನು ನಿಯಮಿತವಾಗಿ ಸೇವಿಸಿ. ಇದು ಹೃದಯದಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕುತ್ತದೆ. ಅದರ ಜೊತೆಗೆ ನಿಂಬೆರಸ, ನೆಲ್ಲಿಕಾಯಿ, ಅಲೋವೆರಾ ಜ್ಯೂಸ್ ಮುಂತಾದ ಡಿಟಾಕ್ಸ್ ಪಾನೀಯಗಳನ್ನು ಸೇವಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...