Kannada Duniya

ಹೊಸವರ್ಷದಲ್ಲಿ ನಿಮ್ಮ ಆಸೆಗಳು ಈಡೇರಲು ನಿಮ್ಮ ರಾಶಿಗನುಗುಣವಾಗಿ ದಾನವನ್ನು ಮಾಡಿ

ಹೊಸ ವರ್ಷ ಸಮೀಪ ಬರುತ್ತಿದೆ. ಜನರು ಈ ವರ್ಷದ ಜಂಜಾಟವನ್ನು ಕಳೆದು ಹೊಸ ಜೀವನದ ಪ್ರಾರಂಭಕ್ಕೆ ಕಾಯುತ್ತಿದ್ದಾರೆ. ಹಾಗೇ ಹೊಸ ವರ್ಷದಲ್ಲಿ ನಮ್ಮ ಜೀವನ ಸುಖವಾಗಿರಲಿ ಎಂದು ಬಯಸುತ್ತಾರೆ. ಅದಕ್ಕಾಗಿ ನೀವು ನಿಮ್ಮ ರಾಶಿಗನುಗುಣವಾಗಿ ದಾನವನ್ನು ಮಾಡಿ.

ಮೇಷ ರಾಶಿಯವರು ಹೊಸವರ್ಷ ಸುಖಕರವಾಗಿರಲು ಉದ್ದಿನ ಬೇಳೆ, ಕೆಂಪು ಮೆಣಸು, ಬೆಲ್ಲವನ್ನು ದಾನ ಮಾಡಿ.

ವೃಷಭ ರಾಶಿಯವರು ಹೊಸವರ್ಷದ ಮೊದಲ ದಿನ ಅಕ್ಕಿ, ಸಕ್ಕರೆ, ಹಾಲು, ಮೊಸರು ಮುಂತಾದವುಗಳನ್ನು ದಾನ ಮಾಡಿ.

ಮಿಥುನ ರಾಶಿಯವರು ಈ ದಿನ ಹಸಿರು ತರಕಾರಿಗಳನ್ನು ದಾನ ಮಾಡಿ, ಹಾಗೇ ಗೋಶಾಲೆಗೆ ಹಣದ ಸಹಾಯ ಮಾಡಿ.

ಕಟಕ ರಾಶಿಯವರು ಈ ದಿನ ಹಾಲು, ಮೊಸರು, ಸಾಬಕ್ಕಿ, ಅನ್ನ ಮುಂತಾದ ಬಿಳಿ ಬಣ್ಣದ ವಸ್ತುಗಳನ್ನು ದಾನ ಮಾಡಿ.

ಸಿಂಹ ರಾಶಿಯವರು ಬೆಲ್ಲ, ಉದ್ದಿನ ಬೇಳೆ, ಜೇನು, ಚಿಕ್ಕಿಯನ್ನು ದಾನ ಮಾಡಿದರೆ ಒಳ್ಳೆಯದು.

ಕನ್ಯಾರಾಶಿಯವರು ಅಗತ್ಯವಿರುವವರಿಗ ಹಸಿರು ತರಕಾರಿಗಳನ್ನು ದಾನ ಮಾಡಿ. ಗೋವುಗಳಿಗೆ ಆಹಾರಕ್ಕಾಗಿ ಹಣವನ್ನು ನೀಡಿ.

ತುಲಾ ರಾಶಿಯವರು ಹೊಸ ವರ್ಷದ ದಿನ ಶಿವನ ದೇವಸ್ಥಾನದ ಬಳಿ ಬಟ್ಟೆಗಳನ್ನು ದಾನ ಮಾಡಿ. ಇದರಿಂದ ಶಿವನ ಆಶೀರ್ವಾದ ದೊರೆಯುತ್ತದೆ.

ವೃಶ್ಚಿಕ ರಾಶಿಯ ಜನರು ಹೊಸ ವರ್ಷದಲ್ಲಿ ಕಡಲೆ, ಬೆಲ್ಲ, ಉದ್ದಿನ ಬೇಳೆಯನ್ನು ದಾನ ಮಾಡಿದರೆ ಒಳ್ಳೆಯದು.

ಧನು ರಾಶಿಯವರು ಹೊಸವರ್ಷದ ದಿನ ಬಾಳೆಹಣ್ಣು, ಹೆಸರುಬೇಳೆ, ಉದ್ದಿನ ಬೇಳೆ, ಲಡ್ಡು ಇತ್ಯಾದಿಗಳನ್ನು ದಾನ ಮಾಡಿ.

ಮಕರ ರಾಶಿಯವರು ಉದ್ದಿನ ಬೇಳೆಯಿಂದ ಆಹಾರವನ್ನು ತಯಾರಿಸಿ ಅದನ್ನು ಬಡವರಿಗೆ ದಾನ ಮಾಡಿ.

ಕುಂಭ ರಾಶಿಯವರು ಈ ದಿನ ಕಪ್ಪು ಎಳ್ಳು, ಸಾಸಿವೆ ಎಣ್ಣೆ, ಮತ್ತು ಕಂಬಳಿಯನ್ನು ದಾನ ಮಾಡಿ.

ಮೀನ ರಾಶಿಯವರು ಹೊಸವರ್ಷದ ದಿನ ದಾರಿಹೋಕರಿಗೆ ಹಳದಿ ಬಟ್ಟೆ, ಕೇಸರಿ ಹಾಕಿದ ಹಾಲನ್ನು ದಾನ ಮಾಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...