Kannada Duniya

ಹಣದ ಕೊರತೆ ನಿವಾರಿಸಲು ಮನಿ ಪ್ಲ್ಯಾಂಟ್ ಸ್ಥಾಪಿಸುವಾಗ ಈ ವಿಷಯಗಳ ಬಗ್ಗೆ ಕಾಳಜಿವಹಿಸಿ…!

ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಮನಿ ಪ್ಲ್ಯಾಂಟ್ ಇಡಲಾಗುತ್ತದೆ. ಹೆಚ್ಚಿನ ಜನರು ಇದನ್ನು ಅಲಂಕಾರದ ವಸ್ತುವೆಂದು ಪರಿಗಣಿಸುತ್ತಾರೆ. ಹಾಗಾಗಿ ಅದನ್ನು ಎಲ್ಲೆಂದರಲ್ಲಿ ಇಡುತ್ತಾರೆ. ಆದರೆ ಇದು ವಾಸ್ತುವಿಗೆ ಸಂಬಂಧಿಸಿದ್ದರಿಂದ ಸ್ಥಾಪಿಸುವಾಗ ಈ ವಿಷಯಗಳ ಬಗ್ಗೆ ಕಾಳಜಿವಹಿಸಿ.

ಮನಿ ಪ್ಲ್ಯಾಂಟ್ ಅನ್ನು ಪೂರ್ವ ಮತ್ತು ದಕ್ಷಿಣ ಮೂಲೆಯಲ್ಲಿ ಇಡುವುದು ಒಳ್ಳೆಯದು. ಇದರಿಂದ ಜನರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸಿರುತ್ತದೆ.

ಮನಿ ಪ್ಲ್ಯಾಂಟ್ ಅನ್ನು ಸೂರ್ಯನ ಬೆಳಕಿನಿಂದ ರಕ್ಷಿಸಬೇಕು. ಹಾಗಾಗಿ ಅದನ್ನು ಸೂರ್ಯ ಬೆಳಕು ಬೀಳದ ಸ್ಥಳದಲ್ಲಿ ಇಡಿ. ಯಾಕೆಂದರೆ ವಾಸ್ತು ಪ್ರಕಾರ ಮನಿ ಪ್ಲ್ಯಾಂಟ್ ಎಲೆ ಹಳದಿ ಬಣ್ಣಕ್ಕೆ ತಿರುಗಿದರೆ ಅಥವಾ ಒಣಗಿದರೆ ಅದು ಶುಭವಲ್ಲ.

chanakya niti:ಚಾಣಕ್ಯ ನೀತಿ; ಈ ವಿಷಯಗಳ ಬಗ್ಗೆ ಎಂದಿಗೂ ನಾಚಿಕೆಪಡಬೇಡಿ, ಆಮೇಲೆ ವಿಷಾದಿಸಬೇಕಾಗುತ್ತದೆ

ಮನಿ ಪ್ಲ್ಯಾಂಟ್ ಬಳ್ಳಿ ಮೇಲಕ್ಕೆ ಏರಿದರೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರಿಂದ ಸಮೃದ್ಧಿ ಹೆಚ್ಚುತ್ತದೆ. ಆದರೆ ಇದರ ಬಳ್ಳಿಯು ಕೆಳಮುಖವಾಗಿ ಹೋದರೆ ಆರ್ಥಿಕ ಅಡಚಣೆಗಳು ಸೃಷ್ಟಿಯಾಗುತ್ತದೆ.

ಮನಿ ಪ್ಲ್ಯಾಂಟ್ ಅನ್ನು ಯಾವಾಗಲೂ ದೊಡ್ಡ ಕುಂಡದಲ್ಲಿ, ಗಾಜಿನ ಬಾಟಲಿನಲ್ಲಿ ನೆಡಬೇಕು. ಹಾಗೇ ಅದನ್ನು ನೀಲಿ ಅಥವಾ ಹಸಿರು ಗಾಜಿನ ಬಾಟಲಿನಲ್ಲಿ ಇಡುವುದು ಮಂಗಳಕರ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...