Kannada Duniya

ವಿದುರ ನೀತಿ ಪ್ರಕಾರ ಈ ಅಭ್ಯಾಸಗಳು ವ್ಯಕ್ತಿಯ ಜೀವನವನ್ನು ಬೇಗನೆ ನಾಶ ಮಾಡುತ್ತದೆಯಂತೆ…!

ಮಹಾಭಾರತದ ಮಹಾಮಂತ್ರಿ ವಿದುರ ಬಹಳ ತಿಳುವಳಿಕೆ ಹೊಂದಿರುವ ವ್ಯಕ್ತಿ, ಇವರ ನೀತಿಗಳು ಇಂದಿಗೂ ಪ್ರಸ್ತುತದಲ್ಲಿದೆ. ಅವರ ನೀತಿಗಳು ಮಾನವ ಸಮಾಜದ ಕಲ್ಯಾಣಕ್ಕೆ ಸಂಬಂಧಿಸಿದೆ. ಹಾಗಾಗಿ ವಿದುರ ನೀತಿಯ ಪ್ರಕಾರ ಈ ಅಭ್ಯಾಸಗಳು ವ್ಯಕ್ತಿಯ ಜೀವನವನ್ನು ಬೇಗನೆ ನಾಶ ಮಾಡುತ್ತದೆಯಂತೆ.

ದುರಾಸೆ : ದುರಾಸೆ ತುಂಬಾ ಕೆಟ್ಟ ಶಕ್ತಿ. ಇದನ್ನು ಹೊಂದಿರುವ ವ್ಯಕ್ತಿ ತನ್ನನ್ನು ತಾನೇ ನಾಶಮಾಡಿಕೊಳ್ಳುತ್ತಾನೆ. ಇದು ಮನುಷ್ಯನ ದೊಡ್ಡ ಶತ್ರು. ಇದು ವ್ಯಕ್ತಿಯ ಜೀವನವನ್ನು ಬೇಗನೆ ನಾಶಮಾಡುತ್ತದೆ. ಇದರಿಂದ ಆತ ಸಂತೋಷವಾಗಿರುವುದಿಲ್ಲ.

ಕೋಪ : ತುಂಬಾ ಕೋಪಿಸಿಕೊಳ್ಳುವ ವ್ಯಕ್ತಿ ತನ್ನ ಜೀವನವನ್ನು ಹಾಳುಮಾಡಿಕೊಳ್ಳುತ್ತಾನಂತೆ. ಕೋಪದ ಕೈಯಲ್ಲಿ ಬುದ್ಧಿ ಕೊಡುವ ವ್ಯಕ್ತಿ ಜೀವನದಲ್ಲಿ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಂಡು ಜೀವನವನ್ನು ನಾಶ ಮಾಡಿಕೊಳ್ಳುತ್ತಾನೆ. ಅದಕ್ಕಾಗಿ ಕೋಪವನ್ನು ಕಡಿಮೆ ಮಾಡಿಕೊಳ್ಳಿ.

ತ್ಯಜಿಸದಿರುವುದು, ಸ್ವಾರ್ಥ : ಜೀವನದಲ್ಲಿ ಸಂತೋಷ ಮತ್ತು ಶಾಂತಿಗಾಗಿ ತ್ಯಜಿಸುವ ಗುಣವನ್ನು ಹೊಂದಿರಬೇಕು. ಸ್ವಾರ್ಥ ಹೊಂದಿರುವ ವ್ಯಕ್ತಿ ಯಾವುದೇ ತ್ಯಾಗ ಮಾಡುವುದಿಲ್ಲ. ಅವರಿಗೆ ಯಾರ ಬೆಂಬಲ, ಪ್ರೀತಿ ಸಿಗುವುದಿಲ್ಲ. ಅಂತವರು ತಮ್ಮ ಜೀವನವನ್ನು ಹಾಳುಮಾಡಿಕೊಳ್ಳುತ್ತಾರೆ.

ನಿಮ್ಮ ಪ್ರೀತಿಯ ಜೀವನ ಉತ್ತಮವಾಗಿರಲು ಈ ವಾಸ್ತು ನಿಯಮ ಪಾಲಿಸಿ

ಅಹಂ : ಅಹಂಕಾರಿಗೆ ಸರಿ, ತಪ್ಪುಗಳ ಬಗ್ಗೆ ಅರಿವಿರುವುದಿಲ್ಲ. ಅವನಿಗೆ ತಾನು ಮಾಡಿದ್ದೆ ಸರಿ ಎಂಬ ಭಾವನೆ ಇರುವುದರಿಂದ ಯಾರ ಮಾತನ್ನು ಕೇಳುವುದಿಲ್ಲ. ಇದರಿಂದ ಸಮಸ್ಯೆಗೆ ಸಿಲುಕಿ ಆತ ತನ್ನ ಜೀವನವನ್ನು ಹಾಳುಮಾಡಿಕೊಳ್ಳುತ್ತಾನೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...