Kannada Duniya

ರಾಮ ಮತ್ತು ಕೃಷ್ಣ ತುಳಸಿಯಲ್ಲಿ ಯಾವ ಗಿಡ ನೆಡುವುದು ಶುಭ….?

ಹಿಂದೂಧರ್ಮದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಮಹತ್ವವಿದೆ. ಇದನ್ನು ಪವಿತ್ರ ಗಿಡವೆಂದು ನಂಬಲಾಗುತ್ತದೆ. ಇದರಲ್ಲಿ ಲಕ್ಷ್ಮಿದೇವಿ ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ. ಹಾಗಾಗಿ ಹೆಚ್ಚಿನ ಜನರು ಮನೆಯಲ್ಲಿ ತುಳಸಿ ಗಿಡವನ್ನು ನೆಡುತ್ತಾರೆ. ಆದರೆ ರಾಮ ಮತ್ತು ಕೃಷ್ಣ ತುಳಸಿಯಲ್ಲಿ ಯಾವ ಗಿಡ ನೆಡುವುದು ಶುಭ? ಎಂಬುದನ್ನು ತಿಳಿದುಕೊಳ್ಳಿ.

ವಾಸ್ತು ಶಾಸ್ತ್ರದಲ್ಲಿ ರಾಮ ಮತ್ತು ಕೃಷ್ಣ ತುಳಸಿಗೆ ವಿಭಿನ್ನ ಮಹತ್ವವಿದೆ. ಆದರೆ ಇದರಲ್ಲಿ ಒಂದನ್ನು ಮನೆಯಲ್ಲಿ ನಡೆಬಹುದು ಇನ್ನೊಂದನ್ನು ಮನೆಯಲ್ಲಿ ನೆಡಬಾರದಂತೆ. ಕೃಷ್ಣ ತುಳಸಿಯ ಎಲೆಗಳು ಕಡು ಹಸಿರು ಬಣ್ಣ ಹಾಗೂ ಕಾಂಡಗಳು ನೇರಳೆ ಬಣ್ಣ ದಲ್ಲಿರುತ್ತದೆ.

ಗುರುವಾರ ಈ ಕೆಲಸ ಮಾಡಿದರೆ ನೀವು ಬಡವರಾಗುತ್ತೀರಂತೆ…!

ರಾಮ ತುಳಸಿಯ ಎಲೆಗಳು ಹಸಿರು ಬಣ್ಣದಲ್ಲಿರುತ್ತದೆ. ಇದು ಅದೃಷ್ಟವನ್ನು ತರುತ್ತದೆಯಂತೆ. ಹಾಗಾಗಿ ಇದನ್ನು ಮನೆಯಲ್ಲಿ ನೆಡುವುದು ಶುಭವಂತೆ. ಇದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ನೆಲೆಸುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...