Kannada Duniya

ರಾಧಾಕೃಷ್ಣರ ಫೋಟೊವಿದ್ದರೆ ಈ ದಿಕ್ಕಿನಲ್ಲಿ ಇಟ್ಟರೆ ಒಳ್ಳೆಯದಾಗುತ್ತದೆಯಂತೆ…!

ಮನೆಯಲ್ಲಿ ಯಾವುದೇ ವಸ್ತುಗಳನ್ನು ಇಡುವಾಗ ಸರಿಯಾದ ಸ್ಥಳದಲ್ಲಿ ವಾಸ್ತು ಪ್ರಕಾರ ಇಡಿ. ಏಕೆಂದರೆ ಅವು ನಿಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ. ವಾಸ್ತು ಸರಿಯಾಗಿರದಿದ್ದರೆ ನಿಮ್ಮ ಜೀವನದಲ್ಲಿ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ನಿಮ್ಮ ಜೀವನ ಸುಮಧುರವಾಗಿರಲು ರಾಧಾಕೃಷ್ಣರ ಫೋಟೊವನ್ನು ಈ ದಿಕ್ಕಿನಲ್ಲಿ ಇಡಿ.

ಮಲಗುವ ಕೋಣೆಯಲ್ಲಿ ದೇವರ ಫೋಟೊವನ್ನು ಹಾಕಬಾರದೆಂದು ಹೇಳುತ್ತಾರೆ. ಆದರೆ ಮಲಗುವ ಕೋಣೆಯಲ್ಲಿ ರಾಧಕೃಷ್ಣರ ಫೋಟೊವನ್ನು ಹಾಕಿದರೆ ಒಳ್ಳೆಯದು. ಇದರಿಂದ ನಿಮ್ಮ ದಾಂಪತ್ಯ ಜೀವನ ಸುಖಕರವಾಗಿರುತ್ತದೆ. ಪತಿಪತ್ನಿಯರ ನಡುವೆ ಪ್ರೀತಿ, ವಿಶ್ವಾಸ ಹೆಚ್ಚಾಗುತ್ತದೆ.

Vastu for Photos: ಮನೆಯಲ್ಲಿ ‘ಫೋಟೋವನ್ನು’ ಹಾಕುವಾಗ ಇದನ್ನು ಫಾಲೋ ಮಾಡಿ…!

ಗರ್ಭಿಣಿಯರ ಕೋಣೆಯಲ್ಲಿ ಶ್ರೀಕೃಷ್ಣನ ಮಗುವಿನ ರೂಪದ ಪೋಟೊವನ್ನು ಇಡುವುದರಿಂದ ಗರ್ಭಿಣಿ ಮಹಿಳೆಯರ ಮನಸ್ಸು ಸಂತೋಷದಿಂದಿರುತ್ತದೆ. ಅವರ ಮನಸ್ಸಿನಲ್ಲಿ ನಕರಾತ್ಮಕ ಆಲೋಚನೆಗಳು ಬರುವುದಿಲ್ಲ.

ಹಾಗೇ ಮಲಗುವ ಕೋಣೆಯಲ್ಲಿ ರಾಧಾಕೃಷ್ಣರ ಪೋಟೊವನ್ನು ಈಶಾನ್ಯ ದಿಕ್ಕಿನಲ್ಲಿ ಇಡಿ. ಹಾಗೇ ಮಲಗುವ ಕೋಣೆಯಲ್ಲಿರುವ ರಾಧಾಕೃಷ್ಣರ ಫೋಟೊಕ್ಕೆ ಪೂಜೆ ಮಾಡಿ. ಹಾಗೇ ಕೃಷ್ಣನ ಮಗುವಿನ ರೂಪದ ಪೋಟೊವನ್ನು ಪೂರ್ವ ದಿಕ್ಕಿನಲ್ಲಿಹಾಕಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...