Kannada Duniya

ಮಕರ ಸಂಕ್ರಾಂತಿಯ ದಿನ ಈ ವಸ್ತುವನ್ನು ಮನೆಯಲ್ಲಿ ಹಾಕುವುದರಿಂದ ಸಮೃದ್ಧಿ ನೆಲೆಸುತ್ತದೆಯಂತೆ

ಜನವರಿ 15ರಂದು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಸೂರ್ಯನು ಉತ್ತರಾಯಣನಾಗುತ್ತಾನೆ. ಅಲ್ಲದೇ ಸೂರ್ಯನು ಈ ದಿನ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಇಂತಹ ಶುಭ ದಿನ ನೀವು ಮನೆಗೆ ಈ ವಸ್ತುವನ್ನು ತಂದರೆ ಒಳ್ಳೆಯದಂತೆ.

ಮಕರ ಸಂಕ್ರಾಂತಿಯ ದಿನ ಸೂರ್ಯದೇವನನ್ನು ಪೂಜಿಸಲಾಗುತ್ತದೆ. ಹಾಗಾಗಿ ಈ ದಿನ ನಿಮ್ಮ ಮನೆಗೆ ಸೂರ್ಯನ ತಾಮ್ರದ ವಿಗ್ರಹವನ್ನು ತನ್ನಿ. ಇದನ್ನು ಮನೆಯ ಪೂರ್ವ ದಿಕ್ಕಿಗೆ ಮುಖ ಮಾಡಿ ಹಾಕಿ. ಇದರಿಂದ ನಿಮಗೆ ಸೂರ್ಯದೇವನ ಅನುಗ್ರಹ ದೊರೆಯುತ್ತದೆಯಂತೆ. ಮನೆಯಲ್ಲಿ ತಂದೆ ಮಗನ ಸಂಬಂಧ ಉತ್ತಮವಾಗಿರುತ್ತದೆಯಂತೆ.

ಇದನ್ನು ಮನೆಯಲ್ಲಿ ಹಾಕುವುದರಿಂದ ಮನೆಯ ವಾಸ್ತು ದೋಷ ನಿವಾರಣೆಯಾಗುತ್ತದೆಯಂತೆ. ಅಲ್ಲದೇ ಮನೆಯಲ್ಲಿರುವ ನಕರಾತ್ಮಕತೆ ದೂರವಾಗಿ ಸಕರಾತ್ಮಕತೆ ಬೆಳೆಯುತ್ತದೆಯಂತೆ. ಇದರಿಂದ ನೀವು ಹೆಸರು , ಖ್ಯಾತಿ ಗಳಿಸುತ್ತೀರಂತೆ. ಅಲ್ಲದೇ ಇದರಿಂದ ನಿಮ್ಮ ವೃತ್ತಿ ಜೀವನದಲ್ಲಿ ಉನ್ನತ ಸ್ಥಾನವನ್ನು ತಲುಪುತ್ತೀರಂತೆ. ನೀವು ಯಾವುದೇ ಕಾರ್ಯಕ್ಕೆ ಕೈಹಾಕಿದರೂ ಅದರಲ್ಲಿ ಯಶಸ್ಸು ಗಳಿಸುತ್ತೀರಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...