Kannada Duniya

ಗರುಡ ಪುರಾಣದ ಪ್ರಕಾರ ಮಹಿಳೆಯರು ಜೀವನದಲ್ಲಿ ಈ ಕೆಲಸ ಮಾಡಬಾರದಂತೆ

ಹಿಂದೂಧರ್ಮದಲ್ಲಿ ಗರುಡ ಪುರಾಣಕ್ಕೆ ಹೆಚ್ಚಿನ ಮಹತ್ವವಿದೆ. ಇದರಲ್ಲಿ ಸಾವು, ಪುನರ್ಜನ್ಮ ಮತ್ತು ಆತ್ಮಗಳ ನರಕ ಜೀವನದ ಬಗ್ಗೆ ಮಾಹಿತಿ ನೀಡಲಾಗಿದೆ.

ಅದರಂತೆ ಗರುಡ ಪುರಾಣದಲ್ಲಿ ತಿಳಿಸಿದಂತೆ ವಿವಾಹಿತ ಮಹಿಳೆಯರು ಜೀವನದಲ್ಲಿ ಈ ಕೆಲಸವನ್ನು ಮಾಡಬಾರದಂತೆ. ಇದರಿಂದ ಪತಿಗೆ ಸಂಕಷ್ಟ ಎದುರಾಗುತ್ತದೆಯಂತೆ.

ಗರುಡ ಪುರಾಣದ ಪ್ರಕಾರ ಮಹಿಳೆ ತನ್ನ ಪತಿಯಿಂದ ಪ್ರತ್ಯೇಕವಾಗಿ ವಾಸಿಸಬಾರದಂತೆ. ಇದು ಗಂಡ ಹೆಂಡತಿಯ ನಡುವೆ ಅಂತರವನ್ನು ಹೆಚ್ಚಿಸಬಹುದು. ಇದರಿಂದ ಸಂಬಂಧ ಹಾಳಾಗುತ್ತದೆ.

ವಿವಾಹಿತ ಮಹಿಳೆ ತಾಯಿ ಮತ್ತು ಗಂಡನ ಮನೆಯವರನ್ನು ನಿಂದಿಸುವುದನ್ನು ತಪ್ಪಿಸಬೇಕು. ಎಲ್ಲರನ್ನೂ ಗೌರವಿಸಬೇಕು, ಇಲ್ಲವಾದರೆ ಗಂಡನ ವ್ಯಕ್ತಿತ್ವ ಹಾಳಾಗುತ್ತದೆ.

ಗರುಡ ಪುರಾಣದ ಪ್ರಕಾರ ವಿವಾಹಿತ ಮಹಿಳೆಯರು ಬೇರೆಯವರ ಮನೆಯಲ್ಲಿ ಹೆಚ್ಚು ಸಮಯ ಉಳಿಯಬಾರದು. ಇದರಿಂದ ಪತಿಯ ಗೌರವಕ್ಕೆ ಧಕ್ಕೆ ಬರುತ್ತದೆಯಂತೆ.

ವಿವಾಹಿತ ಮಹಿಳೆಯರು ಒಬ್ಬರೇ ಏಕಾಂತ ಸ್ಥಳಕ್ಕೆ ಹೋಗಬಾರದು. ಅದರಲ್ಲೂ ಅಪರಿಚಿತರೊಂದಿಗೆ ಹೋಗಬಾರದಂತೆ. ಅಲ್ಲದೇ ಗರ್ಭಿಣಿಯರು ಕೂಡ ಇಂತಹ ಸ್ಥಳಗಳಿಗೆ ಹೋಗಬಾರದಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...