Kannada Duniya

ಈ ಅಶುಭ ವಸ್ತುಗಳನ್ನು ಮನೆಯಿಂದ ಹೊರಹಾಕಿ ದೀಪಾವಳಿಯ ಒಳಗೆ, ಇಲ್ಲವಾದರೆ ಲಕ್ಷ್ಮಿ ಕೋಪಗೊಳ್ಳುತ್ತಾಳೆ….!

ದೀಪಾವಳಿಗೆ ಹಿಂದೂಗಳು ಹೆಚ್ಚಿನ ಮಹತ್ವ ನೀಡುತ್ತಾರೆ. ಎಲ್ಲರೂ ದೀಪಾವಳಿ ಹಬ್ಬಕ್ಕಾಗಿ ಮೊದಲೇ ತಯಾರಿ ಮಾಡಿಕೊಳ್ಳುತ್ತಾರೆ. ಅಂದು ಲಕ್ಷ್ಮಿಯನ್ನು ಪೂಜಿಸುವುದರಿಂದ ಸಂಪತ್ತು ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ. ಆದರೆ ದೀಪಾವಳಿಗೂ ಮುನ್ನ ಮನೆಯನ್ನು ಸ್ವಚ್ಛಗೊಳಿಸಿ ಈ ವಸ್ತುಗಳನ್ನು ಮನೆಯಿಂದ ಹೊರಹಾಕಿ.

-ಮನೆಯಲ್ಲಿ ಕೆಟ್ಟು ಹೋದ ಗೋಡೆ ಗಡಿಯಾರ, ಕೈ ಗಡಿಯಾರಗಳನ್ನು ಮನೆಯಿಂದ ಹೊರಗೆ ಹಾಕಿ. ಇಲ್ಲವಾದರೆ ಇದು ವಾಸ್ತುದೋಷಕ್ಕೆ ಕಾರಣವಾಗುತ್ತದೆ.

-ಮನೆಯಲ್ಲಿ ಒಡೆದ ವಿಗ್ರಹಗಳಿದ್ದರೆ ಅದನ್ನು ಮನೆಯಿಂದ ಹೊರಗೆ ಹಾಕಿ. ಇಲ್ಲವಾದರೆ ಇದರಿಂದ ಮನೆಯಲ್ಲಿ ದುರಾದೃಷ್ಟ ಹೆಚ್ಚಾಗುತ್ತದೆ.

-ಮನೆಯಲ್ಲಿ ಮುರಿದ ಮೇಜು, ಕುರ್ಚಿ ಮುಂತಾದ ಪೀಠೋಪಕರಣಗಳಿದ್ದರೆ ಅದನ್ನು ಮನೆಯಿಂದ ಹೊರಗೆ ಹಾಕಿ. ಹಾಗೇ ಹಾಳಾದ ಚಪ್ಪಲಿ, ಬೂಟುಗಳನ್ನು ಎಸೆಯಿರಿ. ಇಲ್ಲವಾದರೆ ಮನೆಯಲ್ಲಿ ನಕರಾತ್ಮಕ ಶಕ್ತಿ ಹೆಚ್ಚಾಗುತ್ತದೆ.

ಕಸದ ಬುಟ್ಟಿಯನ್ನು ಯಾವ ದಿಕ್ಕಿನಲ್ಲಿ ಇಡಬೇಕು…?… ವಾಸ್ತು ಶಾಸ್ತ್ರದ ಈ ನಿಯಮಗಳನ್ನು ತಿಳಿಯಿರಿ…!

-ಮನೆಯಲ್ಲಿ ಒಡೆದ ಗಾಜುಗಳಿದ್ದರೆ ಅದನ್ನು ಮನೆಯಿಂದ ಎಸೆಯಿರಿ. ಹಾಳಾದ ಲೈಟ್ ಗಳನ್ನು ಸರಿಪಡಿಸಿ. ಇಲ್ಲವಾದರೆ ಮನೆಯಲ್ಲಿ ಕೆಟ್ಟಶಕ್ತಿಗಳ ಹಾವಳಿ ಹೆಚ್ಚಾಗುತ್ತದೆ.

-ಒಡೆದು ಹೋದ ಪಾತ್ರೆಗಳನ್ನು ಅಡುಗೆ ಮನೆಯಿಂದ ಹೊರಗೆ ಹಾಕಿ. ಇಲ್ಲವಾದರೆ ಇದರಿಂದ ಅಡುಗೆ ತಯಾರಿಸಿದರೆ ಆಹಾರ, ಸಂಪತ್ತಿನಲ್ಲಿ ಕೊರತೆ ಕಾಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...