Kannada Duniya

ಗರ್ಭಾವಸ್ಥೆಯಲ್ಲಿ ತಾಯಿ ಖಿನ್ನತೆಗೆ ಒಳಗಾದರೆ ಅದರ ಪರಿಣಾಮ ಈ ಮಗುವಿನ ಮೇಲಾಗುತ್ತದೆಯಂತೆ

ಗರ್ಭಾವಸ್ಥೆಯಲ್ಲಿ ಮಹಿಳೆಯರು ಉತ್ತಮ ವಾತಾವರಣವನ್ನು ಹೊಂದಿರಬೇಕು. ಇದರಿಂದ ಹುಟ್ಟುವ ಮಗು ಆರೋಗ್ಯವಾಗಿರುತ್ತದೆ ಎನ್ನಲಾಗುತ್ತದೆ. ಆದರೆ ಕೆಲವು ತಾಯಂದಿರು ಖಿನ್ನತೆಗೆ ಒಳಗಾಗುತ್ತಾರೆ. ಇದು ಗಂಡು ಅಥವಾ ಹೆಣ್ಣು ಯಾವ ಮಗುವಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಿರಿ.

ಸಂಶೋಧನೆಯ ಪ್ರಕಾರ ಗರ್ಭಾವಸ್ಥೇಯಲ್ಲಿ ತಾಯಿ ಖಿನ್ನತೆಗೆ ಒಳಗಾದರೆ ಹುಟ್ಟುವ ಹೆಣ್ಣು ಮಗುವಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆಯಂತೆ. ಇದು ಮಗಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯಂತೆ. ಇದರ ಪರಿಣಾಮ ಆಕೆಗೆ 10 ವರ್ಷ ತಲುಪಿದ ಬಳಿಕ ಕಾಣಿಸಿಕೊಳ್ಳುತ್ತದೆಯಂತೆ.

ಖಿನ್ನತೆಗೆ ಒಳಗಾದ ತಾಯಿಯ ಮಗಳು 10 ವರ್ಷ ತಲುಪಿದಾಗ ನಿದ್ರಾಹೀನತೆ ಸಮಸ್ಯೆಗೆ ಒಳಗಾಗುತ್ತಾಳಂತೆ. ಮತ್ತು ಅಧ್ಯಯನದ ಬಗ್ಗೆ ಹೆಚ್ಚು ಗಮನ ಕೊಡಲು ಸಾಧ್ಯವಾಗುವುದಿಲ್ಲವಂತೆ. ಇದರಿಂದ ಆಕೆ ಉನ್ನತ ಶಿಕ್ಷಣ ಪಡೆಯಲು ಕಷ್ಟವಾಗುತ್ತದೆ ಎನ್ನಲಾಗುತ್ತದೆ. ಆದರೆ ಗಂಡು ಮಕ್ಕಳ ಮೇಲೆ ಇದರ ಪರಿಣಾಮ ಕಡಿಮೆ ಎನ್ನಲಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...