Kannada Duniya

ಗರ್ಭಿಣಿಯರು ಹಾಗಲಕಾಯಿ ತಿನ್ನಬಾರದು ಯಾಕೆ ಗೊತ್ತಾ?

ಗರ್ಭಿಣಿಯರು ಹಾಗಲಕಾಯಿಯಿಂದ ದೂರವಿರಬೇಕು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಇದಕ್ಕೆ ಮುಖ್ಯ ಕಾರಣಗಳೇನು ಗೊತ್ತೇ?
ಹಾಗಲಕಾಯಿ ಕೆಂಪು ರಕ್ತ ಕಣಗಳನ್ನು ಕಡಿಮೆ ಮಾಡಿ ರಕ್ತಹೀನತೆಯನ್ನು ಉಂಟು ಮಾಡುವ ಸಾಧ್ಯತೆ ಇದೆ. ಹಾಗಾಗಿ ಗರ್ಭಿಣಿಯರು ಇದರಿಂದ ದೂರವಿರುವುದು ಒಳ್ಳೆಯದು.
ರಕ್ತಹೀನತೆಯಿಂದಾಗಿ ಅವಧಿ ಪೂರ್ವ ಪ್ರಸವ ಸಂಭವಿಸಬಹುದು ಇಲ್ಲವೇ ಶಿಶು ಮರಣ ಸಾಧ್ಯತೆಯೂ ಹೆಚ್ಚಬಹುದು. ಕೆಲವೊಮ್ಮೆ ಮಗುವಿನ ತೂಕ ಕಡಿಮೆ ಇದ್ದು ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗಬಹುದು.
ಹಾಗಲಕಾಯಿಯಲ್ಲಿರುವ ಕೆಲವೊಂದು ಅಣುಗಳು ದೇಹಕ್ಕೆ ಸೇರಿದ ಬಳಿಕ ವಾಂತಿ, ಸುಸ್ತು, ವಾಕರಿಕೆಯನ್ನು ಬರಿಸಬಲ್ಲವು. ಕೆಲವರಿಗೆ ಇದು ಅಜೀರ್ಣವಾಗಿ ರಕ್ತಸ್ರಾವ ಉಂಟಾಗಬಹುದು. ಹೀಗಿದ್ದೂ ನಿಮಗೆ ತಿನ್ನಬೇಕೆಂಬ ಬಯಕೆಯಾಗಿದ್ದರೆ ವಾರಕ್ಕೊಮ್ಮೆ ಮಾತ್ರ ಬಳಸಿ. ಬಳಿಕ ದೇಹವನ್ನು ತಂಪು ಮಾಡಿಕೊಳ್ಳಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...