Kannada Duniya

ಗರ್ಭಾಶಯದ ಫೈಬ್ರಾಯ್ಡ್ ಗಳನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರಲ್ಲಿ ಗರ್ಭಾಶಯದ ಫೈಬ್ರಾಯ್ಡ್ ಸಮಸ್ಯೆ ಕಾಡುತ್ತಿದೆ. ಇದು ಹಾರ್ಮೋನ್ ಅಸಮತೋಲ, ಕೆಂಪು ಮಾಂಸ ಸೇವನೆ ಮತ್ತು ಜೆನಿಟಿಕ್ ಮುಂತಾದ ಕಾರಣಗಳಿಂದ ಉಂಟಾಗುತ್ತದೆ. ಇದು ಮುಟ್ಟಿನ ಸಮಯದಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹಾಗಾಗಿ ಈ ಫೈಬ್ರಾಯ್ಡ್ ಗಳನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.

ತ್ರಿಫಲ : ಗರ್ಭಾಶಯದಲ್ಲಿ ಫೈಬ್ರಾಯ್ಡ್ ಸಮಸ್ಯೆ ಇರುವವರು ತ್ರಿಫಲ ಚೂರ್ಣವನ್ನು ಸೇವಿಸಿ. ಇದರಲ್ಲಿ ಆ್ಯಂಟಿ ನಿಯೋಪ್ಲಾಸ್ಟಿಕ್ ಏಜೆಂಟ್ ಗಳನ್ನು ಹೊಂದಿದ್ದು, ಇದು ಫೈಬ್ರಾಯ್ಡ್ ಗಳನ್ನು ನಿವಾರಿಸುತ್ತದೆ. ಹಾಗಾಗಿ ತ್ರಿಫಲ ಚೂರ್ಣದಿಂದ ಕಷಾಯ ತಯಾರಿಸಿ ಕುಡಿಯಿರಿ.

ನೆಲ್ಲಿಕಾಯಿ : ಇದರಲ್ಲಿ ಫೀನಾಲಿಕ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಲಕ್ಷಣವಿದ್ದು, ಇದು ಗರ್ಭಾಶಯದ ಫೈಬ್ರಾಯ್ಡ್ ಗಳಿಗೆ ಚಿಕಿತ್ಸೆ ನೀಡಲು ಪ್ರಯೋಜನಕಾರಿಯಾಗಿದೆ.

ಅರಿಶಿನ : ಇದು ಕರ್ಕ್ಯುಮಿನ್ ಅಂಶವನ್ನು ಹೊಂದಿದ್ದು, ಇದು ಗಡ್ಡೆಯ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಇದರಿಂದ ಗರ್ಭಾಶಯದಲ್ಲಿ ಫೈಬ್ರಾಯ್ಡ್ ಸಮಸ್ಯೆ ಕಾಡುವುದಿಲ್ಲ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...