Kannada Duniya

ಹೋಳಿ ಹಬ್ಬದಂದು ಈ ಕ್ರಮಗಳನ್ನು ಪಾಲಿಸಿದರೆ ಸಮಸ್ಯೆಗಳು ನಿವಾರಣೆಯಾಗುತ್ತದೆಯಂತೆ

ಫಾಲ್ಗುಣ ಮಾಸದ ಶುಕ್ಲಪಕ್ಷದ ಹುಣ್ಣಿಮೆಯಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಬಣ್ಣಗಳ ಹಬ್ಬ. ಈ ದಿನ ಕೆಲವು ಕೆಲಸಗಳನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಎದುರಾದ ಸಮಸ್ಯೆಗಳನ್ನು ನಿವಾರಿಸಬಹುದಂತೆ. ಹಾಗಾಗಿ ಹೋಳಿ ಹಬ್ಬದಂದು ಈ ಕ್ರಮಗಳನ್ನು ಪಾಲಿಸಿದರೆ ಸಮಸ್ಯೆಗಳು ನಿವಾರಣೆಯಾಗುತ್ತದೆಯಂತೆ.

ಹೋಳಿ ಹಬ್ಬದಂದು ಶ್ರೀಹರಿಯನ್ನು ಪೂಜಿಸಿ ಮತ್ತು ವಿಷ್ಣು ಸಹಸ್ರನಾಮವನ್ನು ಪಠಿಸಿ. ಇದರಿಂದ ನಿಮಗೆ ವಿಷ್ಣುವಿನ ಆಶೀರ್ವಾದ ದೊರೆಯುತ್ತದೆಯಂತೆ.

ಹೋಳಿ ಹಬ್ಬದಂದು ಮನೆಯಲ್ಲಿ ಹಳದಿ ಸಾಸಿವೆ, ಅರಿಶಿನ, ಬೆಲ್ಲ, ಕನೆರ್ ಹೂವಿನಿಂದ ಹವನವನ್ನು ಮಾಡಬೇಕು. ಇದರಿಂದ ನಿಮಗೆ ಲಕ್ಷ್ಮಿದೇವಿಯ ಆಶೀರ್ವಾದ ದೊರೆಯುತ್ತದೆಯಂತೆ. ನಿಮ್ಮ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆಯಂತೆ.

ಹೋಳಿ ಹಬ್ಬದಂದು ನರಸಿಂಹನನ್ನು ಪೂಜಿಸಿ. ಇದರಿಂದ ಜೀವನದಲ್ಲಿ ಎದುರಾದ ಸಮಸ್ಯೆಗಳು ಪರಿಹಾರವಾಗುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...