Kannada Duniya

ನಿಮ್ಮ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಈ ಯೋಗ ಮಾಡಿ

ಯೋಗ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಹಾಗಾಗಿ ಪ್ರತಿಯೊಬ್ಬರು ಯೋಗ ಮಾಡುವಂತೆ ತಜ್ಞರು ಸಲಹೆ ನೀಡುತ್ತಾರೆ. ಹಾಗಾಗಿ ಪುರುಷರು ಮತ್ತು ಮಹಿಳೆಯರು ಒತ್ತಡದ ಜೀವನಶೈಲಿಯಿಂದಾಗಿ ಲೈಂಗಿಕತೆಯ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ. ಅದಕ್ಕಾಗಿ ಈ ಯೋಗಾಸನ ಮಾಡಿ.

ಆಂಜನೇಯಾಸನ: ಇದನ್ನು ಮಾಡಲು ಮೊದಲು ನೇರವಾಗಿ ನಿಂತುಕೊಳ್ಳಿ. ನಂತರ ಮೊಣಕಾಲುಗಳನ್ನು ಬಗ್ಗಿಸಿ, ಎರಡು ಕೈಗಳನ್ನು ಕಾಲುಗಳ ನಡುವೆ ನೆಲದ ಮೇಲೆ ಇರಿಸಿ. ನಂತರ ಬಲಗಾಲನ್ನು ಮುಂದಕ್ಕೆ ಚಾಚಿ ಮೊಣಕಾಲಿನ ಮೇಲೆ ಬಗ್ಗಿಸಿ ಹಾಗೇ ಎಡಕಾಲನ್ನು ಹಿಂದಕ್ಕೆ ಸರಿಸಿ ಮೊಣಕಾಲಿನ ಮೇಲೆ ಇರಿಸಿ. ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ಕೈಗಳನ್ನು ಮುಗಿಯಿರಿ.

ಹಲಾಸನ (ನೇಗಿಲು ಭಂಗಿ) : ನೀವು ಬೆನ್ನಿನ ಮೇಲೆ ಮಲಗಿಕೊಂಡು ನಿಮ್ಮ ಕೈಗಳನ್ನು ನೇರವಾಗಿಟ್ಟು ಅಂಗೈಯನ್ನು ಕೆಳಮುಖವಾಗಿರಿಸಬೇಕು. ಬಳಿಕ ನಿಮ್ಮ ಕಾಲುಗಳನ್ನು ನಿಮ್ಮ ತಲೆಯ ಮೇಲೆ ಕಾಲ್ಬೆರಳು ನೆಲ ಸ್ಪರ್ಶಿಸುವಂತೆ ಇರಿಸಿ. ನಿಮ್ಮ ದೇಹ ಲಂಬವಾಗಿರಲಿ. ಒಂದು ನಿಮಿಷ ಈ ಭಂಗಿಯಲ್ಲಿ ಇರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...