Kannada Duniya

ಹಲ್ಲಿಗೆ ಟೂತ್ ಪಿಕ್ ಹಾಕಿಕೊಳ್ಳುವವರು ಒಮ್ಮೆ ಈ ವಿಚಾರ ತಿಳಿದಿರಿ

 

 

 

 

 

 

 

 

 

ಊಟ ಮಾಡಿದ ತಕ್ಷಣ ಹೆಚ್ಚಿನ ಜನರಿಗೆ ಹಲ್ಲುಗಳಲ್ಲಿ ಆಹಾರ ಸಿಲುಕಿಕೊಳ್ಳುತ್ತದೆ. ಇದನ್ನು ತೆಗೆಯಲು ಅವರು ಟೂತ್ ಪಿಕ್ ಅನ್ನು ಹಾಕಿಕೊಳ್ಳುತ್ತಾರೆ. ಆದರೆ ಇದು ಹಲ್ಲು ಮತ್ತು ಒಸಡಿಗೆ ತುಂಬಾ ಹಾನಿಕಾರಕ. ಹಾಗಾಗಿ ಟೂತ್ ಪಿಕ್ ಅನ್ನು ಅತಿಯಾಗಿ ಬಳಸಿದರೆ ಏನಾಗುತ್ತದೆ ಎಂಬುದನ್ನು ತಿಳಿಯಿರಿ.

ಹೆಚ್ಚು ಟೂತ್ ಪಿಕ್ ಬಳಸುವುದರಿಂದ ಒಸಡುಗಳಿಗೆ ಗಾಯವಾಗುತ್ತದೆ. ಇದರಿಂದ ಒಸಡುಗಳಿಂದ ರಕ್ತಸ್ರಾವವಾಗುತ್ತದೆ. ಇದರಿಂದ ತಿನ್ನಲು, ಕುಡಿಯಲು ಕಷ್ಟವಾಗುತ್ತದೆ.

ಟೂತ್ ಪಿಕ್ ಅನ್ನು ಅತಿಯಾಗಿ ಬಳಸಿದರೆ ಹಲ್ಲುಗಳ ನಡುವೆ ಅಂತರ ಉಂಟಾಗುತ್ತದೆ. ಇದರಿಂದ ಆಹಾರಗಳು ಅಲ್ಲಿ ಮತ್ತೆ ಮತ್ತೆ ಸಿಲುಕಿಕೊಳ್ಳು ತ್ತದೆ. ಇದರಿಂದ ಹಲ್ಲಿನಲ್ಲಿ ಕುಳಿಗಳು ಉಂಟಾಗಬಹುದು.

ಪದೇ ಪದೇ ಟೂತ್ ಪಿಕ್ ಹಾಕುವುದರಿಂದ ಹಲ್ಲಿನ ದಂತಕವಚ ಪದರವನ್ನು ಹಾನಿಗೊಳಿಸುತ್ತದೆ. ಇದರಿಂದ ಪದರ ಸವೆಯುತ್ತದೆ. ಆಗ ಹಲ್ಲುಗಳು ದುರ್ಬಲವಾಗುತ್ತವೆ.

 

ಬೀಟ್ ರೋಟ್ ಅತಿಯಾದ ಸೇವನೆ ಈ ಸಮಸ್ಯೆಯನ್ನುಂಟುಮಾಡುತ್ತದೆ

 

ಟೂತ್ ಪಿಕ್ ಬಳಸುವುದರಿಂದ ಹಲ್ಲುಗಳ ಬುಡಗಳಿಗೆ ಹಾನಿಯಾಗುತ್ತದೆ. ಇದರಿಂದ ಹಲ್ಲಿನ ಬುಡ ದುರ್ಬಲಗೊಳ್ಳುತ್ತದೆ. ಇದರಿಂದ ವಯಸ್ಸಾಗುವ ಮುಂಚೆಯೇ ಹಲ್ಲುಗಳು ಉದುರಿ ಹೋಗಬಹುದು.

 

Problems associated with overuse of toothpick


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...