Kannada Duniya

ಬಿಗಿಯಾದ ಜೀನ್ಸ್ ಧರಿಸುವುದರಿಂದ ಅನೇಕ ರೋಗಗಳು ಉಂಟಾಗಬಹುದು….!

ಇಂದಿನ ಹುಡುಗರು ಮತ್ತು ಹುಡುಗಿಯರು ಬಿಗಿಯಾದ ಜೀನ್ಸ್ ಅನ್ನು ಧರಿಸುವುದನ್ನು ಒಂದು ಸ್ಟೈಲ್ ಆಗಿ ಪರಿಗಣಿಸುತ್ತಾರೆ. ಅದಕ್ಕಾಗಿ ಅವರು ಸ್ಟೈಲಿಶ್ ಆಗಿ ಕಾಣಬೇಕೆಂದು ಟೈಟ್ ಜೀನ್ಸ್ ಅನ್ನು ಧರಿಸುತ್ತಾರೆ. ಫ್ಯಾಷನ್ ಮಾಡುವುದು ಉತ್ತಮ. ಆದರೆ ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿವಹಿಸಬೇಕು. ಯಾಕೆಂದರೆ ಬಿಗಿಯಾದ ಜೀನ್ಸ್ ಧರಿಸುವುದರಿಂದ ಈ ಸಮಸ್ಯೆಗಳು ಕಾಡುತ್ತವೆಯಂತೆ.

ಇಂದಿನ ಕಾಲದಲ್ಲಿ ಹೆಚ್ಚಿನ ಹುಡುಗಿಯರು ಸೊಟಂದ ಕೆಳಗೆ ಜೀನ್ಸ್ ಅನ್ನು ತೊಡುತ್ತಾರೆ. ಇದು ಹಿಪ್ ಬೋನ್ ಚಲನೆಯನ್ನು ನಿರ್ಬಂಧಿಸುತ್ತದೆ. ಇದರಿಂದ ಬೆನ್ನು ನೋವಿನ ಸಮಸ್ಯೆ ಕಾಡುತ್ತದೆ. ಅಲ್ಲದೇ ಬಿಗಿಯಾದ ಜೀನ್ಸ್ ದೇಹದ ನರಗಳನ್ನು ಸಂಕುಚಿತಗೊಳಿಸುತ್ತದೆ. ಇದರಿಂದ ಮರಗಟ್ಟುವಿಕೆ ಮತ್ತು ಸುಡುವ ಸಮಸ್ಯೆ ಕಾಡುತ್ತದೆ. ದೇಹದಲ್ಲಿ ನೊವು ಶುರುವಾಗುತ್ತದೆ.

ಕೆಲವರು ಬಿಗಿಯಾದ ಜೀನ್ಸ್ ಅನ್ನು ಧರಿಸಿದಾಗ ಹೊಟ್ಟೆಯ ಮೇಲೆ ಒತ್ತಡ ಬೀಳುತ್ತದೆ. ಇದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಆಮ್ಲೀಯತೆ ಸಮಸ್ಯೆ ಕಾಡುತ್ತದೆ. ಅಲ್ಲದೆ ಇದರಿಂದ ಗರ್ಭಕೋಶದ ಮೇಲೂ ಪರಿಣಾಮ ಬೀರುತ್ತದೆ. ರಕ್ತಸಂಚಾರದಲ್ಲಿ ಅಡಚಣೆಯಾಗುತ್ತದೆ. ಫಲವತ್ತತೆ ಕಡಿಮೆಯಾಗುತ್ತದೆ.

ಬಿಗಿಯಾದ ಬಟ್ಟೆ ಧರಿಸಿದರೆ ಉಸಿರುಗಟ್ಟುವಿಕೆಗೆ ಕಾರಣವಾಗುತ್ತದೆ. ಇದರಿಂದ ಉಸಿರಾಟದ ತೊಂದರೆ ಕಾಡುತ್ತದೆ. ಆಗ ತಲೆ ತಿರುಗುವಿಕೆಯನ್ನು , ಪ್ರಜ್ಞಾಹೀನತೆಯನ್ನು ಅನುಭವಿಸುತ್ತಾರೆ.

ಈ ಚರ್ಮದ ಸಮಸ್ಯೆಗಳಿಗೆ ‘ಕಲ್ಲುಪ್ಪನ್ನು’ ಬಳಸಬಹುದು

ಬಿಗಿಯಾದ ಜೀನ್ಸ್ ಧರಿಸುವುದರಿಂದ ದೇಹ ಸರಿಯಗಿ ಗಾಳಿಯಾಡದೆ ಬೆವರಿನಿಂದ ಯಿಸ್ಟ್ ಉತ್ಪಾದನೆಯಾಗಿ ತುರಿಕೆ, ನೋವು ಕಂಡುಬರುತ್ತದೆ.

Health problems associated with wearing tight jeans


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...