Kannada Duniya

ಈ ತಪ್ಪುಗಳಿಂದ ಹೊಟ್ಟೆಯ ಹುಣ್ಣು ಹೆಚ್ಚಾಗುತ್ತದೆಯಂತೆ

ಹೊಟ್ಟೆಯಲ್ಲಿ ಹುಣ್ಣು ಮೂಡುವುದು ಒಂದು ಸಾಮಾನ್ಯವಾದ ಸಮಸ್ಯೆಯಾಗಿದೆ. ನಮ್ಮ ಕೆಟ್ಟ ಆಹಾರ ಪದ್ಧತಿಯಿಂದ ಈ ಸಮಸ್ಯೆ ಕಾಡುತ್ತದೆ. ಇದರಿಂದ ಹೊಟ್ಟೆಯಲ್ಲಿ ತುಂಬಾ ನೋವು ಮತ್ತು ಸೆಳೆತ ಇರುತ್ತದೆ. ಹಾಗಾಗಿ ಈ ಹೊಟ್ಟೆಯ ಹುಣ್ಣುಉಂಟಾಗಲು ಕಾರಣವೇನು ಎಂಬುದನ್ನು ತಿಳಿಯಿರಿ.

ನಿಮಗೆ ಹಸಿವಾಗುತ್ತಿದ್ದರೂ ನೀವು ಸರಿಯಾದ ಸಮಯಕ್ಕೆ ಆಹಾರ ಸೇವಿಸದಿದ್ದಾಗ ಹೊಟ್ಟೆಯಲ್ಲಿ ಆಮ್ಲ ಹೆಚ್ಚಾಗಿ ಹುಣ್ಣು ಮೂಡುತ್ತದೆ. ಹಾಗಾಗಿ ಸರಿಯಾದ ಸಮಯಕ್ಕೆ ಊಟ ಮಾಡಿ.

ಮಸಾಲೆಯುಕ್ತ ಆಹಾರಗಳನ್ನು ಹೆಚ್ಚು ಸೇವಿಸಿದಾಗ ಹೊಟ್ಟೆಯಲ್ಲಿ ಹುಣ್ಣು ಕಂಡುಬರುತ್ತದೆ. ಮಸಾಲೆಯುಕ್ತ ಆಹಾರವು ಹೊಟ್ಟೆಯಲ್ಲಿ ಆಮ್ಲದ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಹುಣ್ಣು ಉಂಟಾಗುತ್ತದೆ.

ಒತ್ತಡವು ಹೊಟ್ಟೆಯ ಹುಣ್ಣಿಗೆ ಕಾರಣವಾಗುತ್ತದೆಯಂತೆ. ನೀವು ಒತ್ತಡಕ್ಕೆ ಒಳಗಾದಾಗ ದೇಹದಲ್ಲಿ ಒತ್ತಡದ ಹಾರ್ಮೋನ್ ಹೆಚ್ಚಾಗುತ್ತದೆ. ಇದು ಆಮ್ಲದ ಉತ್ಪತ್ತಿಗೆ ಕಾರಣವಾಗುತ್ತದೆ. ಹಾಗಾಗಿ ಪ್ರತಿದಿನ ವ್ಯಾಯಾಮ, ಧ್ಯಾನ, ಯೋಗವನ್ನು ಮಾಡಿ.

ಅತಿಯಾಗಿ ಔಷಧಗಳನ್ನು ಸೇವಿಸುವುದರಿಂದ ಹೊಟ್ಟೆಯ ಒಳಪದರ ದುರ್ಬಲಗೊಳ್ಳುತ್ತದೆ. ಇದರಿಂದ ಹುಣ್ಣುಗಳು ಮೂಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...