Kannada Duniya

ಮಕ್ಕಳಿಗೆ ಸ್ಟೀಮ್ ನೀಡುವಾಗ ಈ ಬಗ್ಗೆ ಎಚ್ಚರವಿರಲಿ….!

ಮಕ್ಕಳನ್ನು  ವೈರಸ್ ನಿಂದ ಕಾಪಾಡಲು ಪೋಷಕರು ವಿವಿಧ ಪರಿಹಾರಗಳನ್ನು ಪ್ರಯತ್ನಿಸುತ್ತಾರೆ. ಅದರಲ್ಲಿ ಸ್ಟೀಮ್ ನೀಡುವುದು ಕೂಡ ಒಂದು. ಆದರೆ ಇದನ್ನು ನೀಡುವಾಗ ಪೋಷಕರು ಈ ಬಗ್ಗೆ ಎಚ್ಚರವಹಿಸಬೇಕು.

ಸ್ಟೀಮ್ ಕಟ್ಟಿಕೊಂಡ ಮೂಗಿನ ನಾಳವನ್ನು ತೆರೆಯಲು ಸಹಾಯ ಮಾಡುತ್ತದೆ ಎಂದು ಅನೇಕ ಸಂಶೋಧನೆಯಿಂದ ತಿಳಿದುಬಂದಿದೆ. ನಾವು ಮಕ್ಕಳಿಗೆ ಬಿಸಿನೀರಿನಿಂದ ಸ್ಟೀಮ್ ನೀಡಿದಾಗ ಗಾಳಿಯಲ್ಲಿರುವ ತೇವಾಂಶವು ಮಗುವಿನ ಮೂಗಿನಲ್ಲಿ ಸಂಗ್ರಹವಾದ ಲೋಳೆಯನ್ನು ಸಡಿಲಗೊಳಿಸುತ್ತದೆ ಮತ್ತು ಉಸಿರಾಡಲು ಸುಲಭಗೊಳಿಸುತ್ತದೆ. ಕೊರೊನಾ ಸಮಯದಲ್ಲಿ ಮಕ್ಕಳಿಗೆ ಶೀತ, ಕಫವಾಗಿದ್ದರೆ ಇದು ಬಹಳ ಸಹಕಾರಿ. ಆದರೆ ಮಕ್ಕಳಿಗೆ ಸ್ಟೀಮ್ ನೀಡುವಾಗ ಕೆಲವು ವಿಚಾರಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ.

ಈ ಪಾನೀಯವನ್ನು ಸೇವಿಸಿ ನಿಮ್ಮ ತೂಕವನ್ನು ಇಳಿಸಿಕೊಳ್ಳಿ….!

-ಇದಕ್ಕೆ ಬಿಸಿ ನೀರನ್ನು ಬಳಸುವುದರಿಂದ ತುಂಬಾ ಜಾಗರೂಕರಾಗಿರಿ. ಈ ನೀರು ಚೆಲ್ಲಿದರೆ ಮಕ್ಕಳ ಮೈಕೈ ಸುಟ್ಟು ಹೋಗಬಹುದು.

-ಸ್ಟೀಮ್ ನೀಡುವಂತಹ ಸಾಧನದ ಸ್ವಚ್ಛತೆ ಅತಿ ಅವಶ್ಯಕ. ಇಲ್ಲದಿದ್ದರೆ ಅದು ಸೋಂಕು ಹರಡುವಿಕೆಗೆ ಕಾರಣವಾಗಬಹುದು.

-ಮಕ್ಕಳಿಗೆ ಸ್ಟೀಮ್ ನೀಡುವಾಗ ಮಕ್ಕಳನ್ನು ತುಂಬಾ ಹತ್ತಿರದಲ್ಲಿ ಕೂರಿಸಬೇಡಿ. ಇದರಿಂದ ಬಿಸಿ ಆವಿ ಅವರಿಗೆ ತಗುಲಿ ಸುಡಬಹುದು.

-ಸ್ವಯಂಚಾಲಿತವಾಗಿ ಆಫ್ ಆಗುವಂತಹ ಸ್ಟೀಮ್ ಅನ್ನು ಬಳಸಿ. ಇವುಗಳಲ್ಲಿ ಸಮಯವನ್ನು ನಿಗದಿಪಡಿಸಬಹುದು ಮತ್ತು ನೀರು ಖಾಲಿಯಾದಾಗ ಸಾಧನ ಸ್ವಯಂಚಾಲಿತವಾಗಿ ನಿಲ್ಲುವಂತಿದ್ದರೆ ಉತ್ತಮ. ಇದರಿಂದ ಅದನ್ನು ಪದೇ ಪದೇ ಪರೀಕ್ಷಿಸುವ ಅಗತ್ಯವಿರುವುದಿಲ್ಲ. ಹಾಗೇ ಮಕ್ಕಳಿಗೆ ಸ್ಟೀಮ್ ತೆಗೆದುಕೊಳ್ಳಲು ಇಷ್ಟವಿಲ್ಲದಿದ್ದರೆ ಒತ್ತಾಯಿಸಬೇಡಿ.

 

Points to take care of while kids are taking steam for their safety


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...